ಸಲ್ಲು ಭಾಯ್ ನಟನೆಯ ‘ಅಂತಿಮ್-ದಿ ಫೈನಲ್ ಟ್ರುತ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಖತ್ ಆ್ಯಕ್ಷನ್ನಿಂದ ಕೂಡಿದೆ. ಸಲ್ಲು ಖಡಕ್ ಸಿಖ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ. ಈ ಟ್ರೇಲರ್ ನೋಡಿದ ಮೇಲೆ ‘ಅಂತಿಮ್’ ಬಗ್ಗೆ ಇದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ನವೆಂಬರ್ 26ರಂದು ಸಿನಿಮಾ ತೆರೆಗೆ ಬರುತ್ತಿದೆ.
ಆಯುಶ್ ಶರ್ಮಾ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಂಡರೆ, ಸಲ್ಲು ಸಿಖ್ ಪೊಲೀಸ್ ಆಗಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಂದು ರಿಲೀಸ್ ಆದ ಟ್ರೇಲರ್ ಸಿನಿಮಾ ಬಗ್ಗೆ ಭರವಸೆ ಮೂಡಿಸುವಂತೆ ಮಾಡಿದೆ. ಒಂದು ದೃಶ್ಯದಲ್ಲಿ ಸಲ್ಮಾನ್ ಖಾನ್ ಸಿಕ್ಸ್ ಪ್ಯಾಕ್ ತೋರಿಸುತ್ತಾರೆ. ಈ ದೃಶ್ಯಗಳಿಗೆ ಚಿತ್ರಮಂದಿರದಲ್ಲಿ ಶಿಳ್ಳೆ ಬೀಳೋದು ಪಕ್ಕಾ. ಸಲ್ಮಾನ್ ಖಾನ್ ನಟನೆಯ ಈ ಹಿಂದಿನ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಈಗ ‘ಅಂತಿಮ್’ ಸಿನಿಮಾ ಮೂಲಕ ಗೆಲುವು ಕಾಣಲೇ ಬೇಕಾದ ಅನಿವಾರ್ಯತೆ ಸಲ್ಲುಗೆ ಎದುರಾಗಿದೆ.
****