ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿರುವ ‘100’ ಸಿನಿಮಾ ರಿಲೀಸ್ ಡೇಟ್ ಘೋಷಣೆಯಾಗಿದೆ. ನವಂಬರ್ 19 ರಿಂದ 100 ಸಿನಿಮಾ ಥಿಯೇಟರ್ ನಲ್ಲಿ ತೆರೆ ಕಾಣಲಿದೆ. ಈ ಸಿನಿಮಾ ಸೈಬರ್ ಕ್ರೈಂ ಆಧಾರಿತ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿದೆ.

ರಮೇಶ್ ಅರವಿಂದ್ ಜೊತೆಗೆ ರಚಿತಾ ರಾಮ್, ಪೂರ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಚಿತಾ ರಾಮ್ ಗೆ ರಮೇಶ್ ಅರವಿಂದ್ ಜೊತೆ ಇದು 2ನೇ ಚಿತ್ರ, ಪುಷ್ಪಕ ವಿಮಾನ ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ ರಚ್ಚು ತೆರೆ ಹಂಚಿಕೊಂಡಿದ್ರು. ಈ ಸಿನಿಮಾ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡಲಿದೆ ಎನ್ನುವುದು ರಮೇಶ್ ಅರವಿಂದ್ ಅಭಿಪ್ರಾಯ. ಎಂ. ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
****