ಹಾಲಿವುಡ್ ಕೂಡ ಕನ್ನಡ ಚಿತ್ರರಂಗ ಕಡೆ ತಿರುಗಿ ನೋಡುವಂತೆ ಮಾಡಿದ ಚಿತ್ರ ಕೆಜಿಎಫ್ ಅದರ ಮೇಕಿಂಗ್, ಸ್ಟೋರಿ, ಸ್ಕ್ರೀನ್ ಪ್ಲೇ, ಮ್ಯೂಸಿಕ್ ಎಲ್ಲವೂ ಸಾಥ್ ಕೊಟ್ಟಿತ್ತು ಅದರಲ್ಲೂ ರವಿ ಬಸ್ರೂರ್ ಅವರ ಸಂಗೀತ ಸಂಯೋಜನೆ ಕೆಜಿಎಫ್ ಚಿತ್ರದ ಹೈಲೈಟ್.
ರವಿ ಬಸ್ರೂರ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ ಅವರು ಬಾಲಿವುಡ್ ಗೂ ತಮ್ಮ ಮ್ಯೂಸಿಕ್ ಕಿಕ್ ನೀಡುತ್ತಿರುವುದು ಗೊತ್ತೇ ಇದೆ, ಇನ್ನೂ ಖುಷಿಯ ವಿಚಾರ ಏನಂದ್ರೆ ಸಲ್ಮಾನ್ ಖಾನ್ ಅಭಿನಯಿಸಿರುವ ‘ಅಂತಿಮ್’ ದಿ ಫೈನಲ್ ಟ್ರುಥ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಕತ್ ಸೌಂಡ್ ಮಾಡ್ತಿದೆ. ಅಂತಿಮ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿರುವುದು ಕನ್ನಡಿಗರಾದ ರವಿ ಬಸ್ರೂರ್. ರವಿ ಬಸ್ರೂರ್ ಅವರ ಮ್ಯೂಸಿಕ್ ಮಾಂತ್ರಿಕ ಶಕ್ತಿಗೆ ಮಾರುಹೋಗಿರುವ ಸಲ್ಮಾನ್ ಖಾನ್ ರವಿ ಅವರನ್ನು ಹಾಡಿ ಹೊಗಳಿದ್ದಾರೆ.
****