31.5 C
Bengaluru
Tuesday, March 28, 2023
spot_img

‘ತಲೈವಾ’ ರಜಿನಿಗೆ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ..

ಭಾರತೀಯ ಚಿತ್ರರಂಗದ ‘ಸೂಪರ್​ ಸ್ಟಾರ್​’ ರಜನಿಕಾಂತ್  ಅವರು ಇಂದು (ಅ.25) ಪ್ರತಿಷ್ಠಿತ ‘ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ’ ಸ್ವೀಕರಿಸಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ಈ ಸಮಾರಂಭ ನಡೆದಿದೆ. ಸಿನಿಮಾ ಕ್ಷೇತ್ರದಲ್ಲಿ ಸಾಧನೆಗಾಗಿ ರಜನಿಕಾಂತ್​ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. 67ನೇ ರಾಷ್ಟ್ರ ಪ್ರಶಸ್ತಿ ಸಮಾರಂಭ ಇದಾಗಿದ್ದು, 2019ರಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.

ಮಲಯಾಳಂ ಸಿನಿಮಾ ‘ಮರಕ್ಕರ್​: ಲಯನ್​ ಆಫ್​ ದಿ ಅರೇಬಿಯನ್​ ಸೀ’ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ‘ಭೋಂಸ್ಲೆ’ ಚಿತ್ರಕ್ಕಾಗಿ ಮನೋಜ್​ ಬಾಜಪೇಯಿ ಹಾಗೂ ‘ಅಸುರನ್​’ ಚಿತ್ರಕ್ಕಾಗಿ ಧನುಶ್​ ಅವರು ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ಪಂಗಾ’ ಮತ್ತು ‘ಮಣಿಕರ್ಣಿಕಾ’ ಚಿತ್ರಗಳಿಗಾಗಿ ಕಂಗನಾ ರಣಾವತ್​ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಸಿಕ್ಕಿದೆ.

ಕನ್ನಡದ ಅತ್ಯುತ್ತಮ ಸಿನಿಮಾ ಎಂಬ ಖ್ಯಾತಿಗೆ ಈ ವರ್ಷ ‘ಅಕ್ಷಿ’ ಚಿತ್ರ ಪಾತ್ರವಾಗಿದೆ. ಇದಕ್ಕೆ ನಿರ್ದೇಶನ ಮಾಡಿರುವುದು ಹೊಸ ನಿರ್ದೇಶಕ ಮನೋಜ್​ ಕುಮಾರ್. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ​ ಅವರಿಗೆ ನಿರ್ದೇಶಕನಾಗಿ ‘ಅಕ್ಷಿ’ ಮೊದಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ತಂತಸದ ವಿಚಾರ.

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles