21.8 C
Bengaluru
Wednesday, November 30, 2022
spot_img

ತಮನ್ನಾ ಕೋರ್ಟ್ ಮೆಟ್ಟಿಲು ಹತ್ತುವ ನಿರ್ಧಾರ ತೆಗೆದುಕೊಂಡಿದ್ದಾರಂತೆ ನಿಜಾನಾ..? ಯಾಕಂತಾ ಗೋತ್ತಾ?

ಹೌದು, ಮಿಲ್ಕಿ ಬ್ಯೂಟಿ ತಮನ್ನಾಗೆ ಮೋಸ ಆಗಿದೆಯಂತೆ. ತೆಲುಗಿನ ಜನಪ್ರಿಯ ವಾಹಿನಿ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುವ ‘ಮಾಸ್ಟರ್​ ಶೆಫ್’ ಅಡುಗೆ ಶೋವನ್ನು ತಮನ್ನಾ ನಡೆಸಿಕೊಡುತ್ತಿದ್ದರು. ಈ ಶೋ ನಿರೂಪಣೆಗೆ ತಮನ್ನಾ ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಟಿಗೆ ಸರಿಯಾಗಿ ಸಂಭಾವನೆ ನೀಡದೆ ವಂಚಿಸಲಾಗಿದೆಯಂತೆ. ಇದಲ್ಲದೆ ಅಡುಗೆ ರಿಯಾಲಿಟಿ ಶೋ ಸೆಟ್​ನಲ್ಲಿ ಯಾರೂ ಕೂಡ ನಟಿ ಜೊತೆ ಸರಿಯಾಗಿ ನಡೆದುಕೊಂಡಿಲ್ಲವಂತೆ. ಹೀಗಾಗಿ ತಮಗಾಗಿರುವ ಮೋಸದ ವಿರುದ್ಧ ತಮನ್ನಾ ಕೋರ್ಟ್ ಮೆಟ್ಟಿಲು ಹತ್ತುವ ನಿರ್ಧಾರ ತೆಗೆದುಕೊಂಡಿದ್ದಾರಂತೆ.

ಜೆಮಿನಿ ಟಿವಿಯ ‘ಮಾಸ್ಟರ್‌ಚೆಫ್’ ಅಡುಗೆ ಶೋ ಮೂಲಕ ನಟಿ ತಮನ್ನಾ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಆದರೆ ಆರಂಭದಲ್ಲಿಯೇ ಅವರಿಗೆ ಇಲ್ಲಿ ಕಹಿ ಅನುಭವವಾಗಿದೆ. ಆಗಸ್ಟ್ 27ರಂದು ಈ ಅಡುಗೆ ಶೋ ಆರಂಭಗೊಂಡಿದ್ದು, ಇದುವರೆಗೆ 20ಕ್ಕೂ ಹೆಚ್ಚು ಎಪಿಸೋಡ್​ಗಳಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ. ಈ ಅಡುಗೆ ಕಾರ್ಯಕ್ರಮದಲ್ಲಿ ನಟಿ ಹಾಕಿದ್ದ ಮನಮೋಹಕ ಬಟ್ಟೆಗಳ ಬಗ್ಗೆಯೂ ವ್ಯಾಪಕ ಚರ್ಚೆಯಾಗಿತ್ತು. ಆದರೆ ವಾಹಿನಿಯವರು ನಟಿ ಜೊತೆಗೆ ಸರಿಯಾಗಿ ನಡೆದುಕೊಳ್ಳದೆ ಅಗೌರವ ತೋರಿದ್ದಾರೆ ಅಂತಾ ಆರೋಪಿಸಲಾಗಿದೆ. ಬರಬೇಕಾದ ಸಂಭಾವನೆ ಬಾರದ ಹಿನ್ನೆಲೆ ನಟಿ ಶೋನಿಂದ ಹೊರಬಂದಿದ್ದಾರೆ. ಸದ್ಯ ಖ್ಯಾತ ಆಯಂಕರ್​ ಅನುಸೂಯಾ ಭಾರದ್ವಾಜ್​ ಈ ಶೋ ನಡೆಸಿಕೊಡುತ್ತಿದ್ದಾರೆ.

ತಮನ್ನಾ ಪರ ಅವರ ವಕೀಲರು ಹೇಳಿಕೆ ನೀಡಿದ್ದು, ‘ಮಾಸ್ಟರ್ ಚೆಫ್’ ಅಡುಗೆ ಶೋ ಗೆ ವಾಹಿನಿಯರು ತಮನ್ನಾರಿಗೆ ಬಾಕಿ ಪಾವತಿಸಿಲ್ಲ. ಪ್ರೊಡಕ್ಷನ್ ಹೌಸ್ ಇನ್ನೋವೇಟಿವ್ ಫಿಲ್ಮ್ ಅಕಾಡೆಮಿಯ ವೃತ್ತಿಪರವಲ್ಲದ ನಡವಳಿಕೆಗೆ ಬೇಸರ ವ್ಯಕ್ತಪಡಿಸಿರುವ ನಟಿ ತಮನ್ನಾ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ವಾಹಿನಿಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ನಟಿ ಶೋನಿಂದ ಹೊರಬಂದಿದ್ದಾರೆ. ವಾಹಿನಿಯ ವಿರುದ್ಧ ಕಾನೂನು ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ’ ಅಂತಾ ಹೇಳಿದ್ದಾರೆ. ತಮ್ಮ ನೆಚ್ಚಿನ ಸ್ಟಾರ್ ನಟಿಗೆ ಮೋಸ ಆಗಿರುವುದಕ್ಕೆ ಅಭಿಮಾನಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles