ಲವ್ಲಿ ಸ್ಟಾರ್ ಪ್ರೇಮ್ ಅವರ “ಪ್ರೇಮಂ ಪೂಜ್ಯಂ” ಚಿತ್ರವು ಸೆನ್ಸಾರ್ ಪರೀಕ್ಷೆಯನ್ನ ಯಶಸ್ವಿಯಾಗಿ ಪೂರೈಸಿ UA ಸರ್ಟಿಫಿಕೇಟ್ ಪಡೆದಿದೆ, ಮೂರು ತಿಂಗಳಿನಿಂದ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತ ಪ್ರಚಾರದ ಪಡಸಾಲೆಯಲ್ಲಿ ಸೌಂಡ್ ಮಾಡುತ್ತಾ ಬಂದಿದ್ದ ಪ್ರೇಮಂ ಪೂಜ್ಯಂ ಸಿನಿಮಾದ ಮೇಲಿನ ಪ್ರೀತಿ ಅಭಿಮಾನದಿಂದ ಚಿತ್ರ ತಂಡದಿಂದ ದೊಡ್ಡ ನಿರ್ಧಾರ ಕೈಗೊಂಡಿದೆ.
ಹೌದು ಕನ್ನಡ ಚಿತ್ರೋದ್ಯಮದ ಹಿತದೃಷ್ಟಿಯಿಂದ ಈಗ ರಿಲೀಸ್ ವಿಚಾರದಲ್ಲಿ ದೊಡ್ಡ ನಿರ್ಧಾರಕ್ಕೆ ಪ್ರೇಮಂ ಪೂಜ್ಯಂ ಸಿನಿ ತಂಡ ಬಂದಿದ್ದು, ಅಕ್ಟೋಬರ್ 29 ಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರದ ಡೇಟ್ಸ್ ಅನ್ನು ಮುಂದೂಡಿದೆ. ಇದು ಪ್ರೇಮ್ ಅವರ ಬಹು ನಿರೀಕ್ಷೆಯ ಚಿತ್ರವೆನ್ನಬಹುದು. ಪ್ರೇಮಂ ಪೂಜ್ಯಂ ಸಿನಿಮಾದ ರಿಲೀಸ್ ಡೇಟ್ ಫೀಕ್ಸ್ ಆಗಿತ್ತು ಆದರೆ ಒಂದೊಳ್ಳೆ ಡೇಟ್ ಗೆ ಜನರನ್ನ ದೊಡ್ಡ ಮಟ್ಟಕ್ಕೆ ಥಿಯೇಟರ್ ಕಡೆ ಕರೆತರುವ ದೃಷ್ಟಿಯಿಂದ ಚಿತ್ರ ತಂಡ ಹೊಸ ಪ್ಲಾನ್ ಮಾಡಿದೆ ಮತ್ತು ‘ಪ್ರೇಮಂ ಪೂಜ್ಯಂ’ ಸಿನಿಮಾದ ಹೊಸ ರಿಲೀಸ್ ಡೇಟ್ ಅನ್ನು ಕೂಡ ಚಿತ್ರತಂಡ ಶೀಘ್ರದಲ್ಲೇ ಅನೌನ್ಸ್ ಮಾಡಲಿದೆ.
ಇದು ಸಿನಿರಂಗದ ಹಿತದೃಷ್ಟಿಯಿಂದ ಚಿತ್ರತಂಡ ತೆಗೆದುಕೊಳ್ತಿರುವ ನಿರ್ಧಾರವಾಗದೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರ ಭಜರಂಗಿ-2 ಚಿತ್ರ ಇದೇ ಅಕ್ಟೋಬರ್ 29ರಂದು ತೆರೆಮೇಲೆ ಬರಲಿದೆ. ಶಿವಣ್ಣ ಅಂದ್ರೆ ಅಪಾರ ಪ್ರೀತಿ-ಅಭಿಮಾನ ಹೊಂದಿರುವ ಪ್ರೇಮ್ ತಮ್ಮ ಸಿನಿಮಾದ ರಿಲೀಸ್ ಡೇಟ್ ಅನ್ನು ಮುಂದೂಡಲು ಚಿತ್ರತಂಡದೊಂದಿಗೆ ನಿರ್ಧರಿಸಿದ್ದಾರೆ. ಪ್ರೇಮ್ ಮತ್ತು ಪ್ರೇಮಂ ಪೂಜ್ಯಂ ಚಿತ್ರತಂಡದ ಈ ನಿರ್ಧಾರ ಶಿವಣ್ಣ ಅವರ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗುವುದು ಮಾತ್ರವಲ್ಲ.., ಸ್ಯಾಂಡಲ್ ವುಡ್ ನಲ್ಲಿ ಸಾಮರಸ್ಯವನ್ನು, ವಿಶ್ವಾಸವನ್ನು ಹೆಚ್ಚಿಸಲಿದೆ. ಆ ಮೂಲಕ ಸ್ಟಾರ್ ವಾರ್ ರೂಮರ್ಸ್ ಗಳಿಗೂ ಕಡಿವಾಣ ಆಗಲಿದೆ ಎನ್ನಬಹುದು.
****