ಮುತ್ತಿನ(ಕಿಸ್) ಕಥೆ ಹೇಳಲು ಸಜ್ಜಾಗಿದ್ದಾರೆ ಕ್ರೇಜಿಸ್ಟಾರ್ ಪುತ್ರ ಮನು, ಏನಿದು ಕಿಸ್ ಕಥೆ ಅಂತೀರಾ ಸ್ಯಾಂಡಲ್ ವುಡ್ ನಲ್ಲಿ ಮನು ಅಭಿನಯದ ಮುಗಿಲ್ ಪೇಟೆ ಚಿತ್ರ ತೆರೆಗೆ ಬರಲು ರೆಡಿ ಇದೆ, ಈ ಚಿತ್ರದಲ್ಲಿ ನಾಯಕ ಮನು ನಾಯಕಿ ಕಯಾದು ಲೋಹರ್ ಅವರಿಗೆ ಕಿಸ್ ಮಾಡುವ ವಿಡಿಯೋ ಒಂದು ರಿಲೀಸ್ ಆಗಿದೆ, ಅದರ ಕಂಪ್ಲೀಟ್ ಪಿಚ್ಚರ್ ನಾಳೆ (ಅ.25) ಹೊರಬೀಳಲಿದೆ.
ಕನ್ನಡ ಚಿತ್ರರಂಗದಲ್ಲಿ 1987 ರಲ್ಲಿ ತೆರೆ ಕಂಡ ಪ್ರೇಮಲೋಕ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಒಂದು ಮೈಲಿಗಲ್ಲು.. ಈ ಚಿತ್ರ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ದೊಡ್ಡ ಬ್ರೇಕ್ ಮತ್ತು ಸಕ್ಸಸ್ ತಂದು ಕೊಟ್ಟಿತ್ತಲ್ಲದೆ ಇಂದಿಗೂ ಪಡ್ಡೆ ಹುಡುಗರ ಪಾಲಿಗೆ ಪ್ರೇಮಕಾವ್ಯ.. ಈಗ ಕ್ರೇಜಿಸ್ಟಾರ್ ಅವರ ಪುತ್ರ ಮನು ಸಿನಿ ಪಯಣ ಆರಂಭಿಸಿ ಪ್ರೇಮ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ..
ಮುಗಿಲ್ ಪೇಟೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡುಕೊಳ್ಳಲು ಹೊರಟಿದ್ದಾರೆ ಕ್ರೇಜಿ ಸ್ಟಾರ್ ಪುತ್ರ ಮನು.. ಈ ಚಿತ್ರ ನವೆಂಬರ್ 12 ಕ್ಕೆ ತೆರೆಗೆ ಬರಲು ಸಿದ್ದವಾಗಿದೆ. 1987 ರಲ್ಲಿ ತೆರೆ ಕಂಡ ಪ್ರೇಮಲೋಕ ಸೃಷ್ಟಿಸಿದ ಕ್ರೇಜ್ ಮತ್ತೆ ಮುಗಿಲ್ ಪೇಟೆ ಸೃಷ್ಟಿಸುತ್ತಾ ಕಾದುನೋಡಬೇಕಿದೆ.. ಇದರ ಒಂದು ಝಲಕ್ ನಾಳೆ ಬಿಡುಗಡೆಯಾಗುತ್ತಿದ್ದು ಅದನ್ನು ಚಿತ್ರತಂಡ ಹಂಚಿಕೊಂಡಿದೆ.. ನಾಳೆ (ಅ25) ಬಿಡುಗಡೆ ಆಗಲಿರುವ ವೀಡಿಯೋದಲ್ಲಿ ಏನು ಸರ್ಪ್ರೈಸ್ ಇರಲಿದೆ ಎಂದು ಕ್ರೇಜಿಸ್ಟಾರ್ ಅಭಿಮಾನಿಗಳು ಕುತೂಹಲಗೊಂಡಿದ್ದಾರೆ.
****