ಕನ್ನಡ ಚಿತ್ರರಂಗದ ಯುವರಾಜ ನಿಖಿಲ್ ಕುಮಾರಸ್ವಾಮಿ ಸಿನಿಮಾ ಮತ್ತು ಪಾಲಿಟಿಕ್ಸ್ ನಲ್ಲಿ ಸದಾ ಬ್ಯೂಸಿ ಇರ್ತಾರೆ. ಬ್ಯೂಸಿ ಶೆಡ್ಯೂಲ್ ನಡುವೆ ಅಣ್ಣವ್ರ ಮನೆಗೆ ಅಂದ್ರೆ ರಾಘವೇಂದ್ರ ರಾಜಕುಮಾರ್ ಅವರ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ದೊಡ್ಮನೆ ಕುಟುಂಬವನ್ನು ಭೇಟಿ ಮಾಡಿರುವ ಕುರಿತು ತಮ್ಮ ಇನ್ಸ್ಟಾಗ್ರಾಮ್ ಅಲ್ಲಿ ಫೋಟೋ ಹಂಚಿಕೊಂಡಿದ್ದಾರೆ ನಿಖಿಲ್, “ರಾಘಣ್ಣ ಅಮ್ಮ ಗುರು ಮತ್ತು ವಿನಯ್ ಅವರನ್ನು ಭೇಟಿಯಾಗಿ ಬಹಳ ಸಂತೋಷವಾಗಿದೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು , ನಾನು ಸದಾ ಅಣ್ಣಾವ್ರ ಮತ್ತು ಅವರ ಕುಟುಂಬದ ಅಭಿಮಾನಿ” ಎಂದು ಬರೆದುಕೊಂಡಿದ್ದಾರೆ.
ರಾಘಣ್ಣನಿಗೂ ನಿಖಿಲ್ ಕಂಡರೆ ತುಂಬಾ ಪ್ರೀತಿ, ನಿನ್ನನ್ನು ನೋಡದೆ ತುಂಬಾ ದಿನಗಳಾಗಿವೆ ಮನೆಗೆ ಬಾ ಎಂದು ಪ್ರೀತಿಯಿಂದ ಆಮಂತ್ರಿಸಿದ್ರಂತೆ, ರಾಘಣ್ಣನ ಮಾತಿಗೆ ಗೌರವ ಕೊಟ್ಟು ಅವರ ಮನೆಗೆ ಭೇಟಿ ನೀಡಿದ್ದಾರೆ ನಿಖಿಲ್.
****