ಡಾಲಿ ಧನಂಜಯ್ ನಟನೆಯ ರತ್ನನ್ ಪ್ರಪಂಚ ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈಗಾಗ್ಲೆ ಟ್ರೈಲರ್ ನೋಡಿ ಮೆಚ್ಚುಗೆ ಸೂಚಿಸಿದ್ದ ನಟಿ ರಮ್ಯಾ ಇದೀಗ ಸಿನಿಮಾ ಕೂಡ ಮೆಚ್ಚಿಕೊಂಡಿದ್ದಾರೆ. ಇದ್ರ ಮಧ್ಯೆ ರತ್ನನ್ ಪ್ರಪಂಚ ಸಿನಿಮಾದ ಬಗ್ಗೆ ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದಾರೆ.
ಈ ಸಿನಿಮಾದಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸಲು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಮೊದಲು ಆಫರ್ ನೀಡಲಾಗಿತ್ತಂತೆ. ರತ್ನನ್ ಪ್ರಪಂಚ ಸಿನಿಮಾ ನೋಡಿ ಟ್ವೀಟ್ ಮಾಡಿದ ನಟಿ ರಮ್ಯಾ ಕಲಾವಿದರಾದ ಡಾಲಿ ಧನಂಜಯ್, ಉಮಾಶ್ರೀ, ಪ್ರಮೋದ್, ಶ್ರುತಿ, ವೈನಿಧಿ, ಅಚ್ಯುತ್ ಕುಮಾರ್, ಅನು ಪ್ರಭಾಕರ್, ರವಿಶಂಕರ್ ಎಲ್ಲರೂ ಬ್ರಿಲಿಯಂಟ್. ರೆಬಾ ಮೋನಿಕಾ ಅವರೇ, ನಾನು ನಿಮಗಿಂತಲೂ ಉತ್ತಮವಾಗಿ ನಟಿಸುತ್ತಿರಲಿಲ್ಲ. ಕಾರ್ತಿಕ್ ಗೌಡ ಹಾಗೂ ಯೋಗಿ ಜಿ.ರಾಜ್ ಮುಡಿಗೆ ಇನ್ನೊಂದು ಗರಿ ಸೇರಿದೆ. ನಿರ್ದೇಶಕ ರೋಹಿತ್ ಪದಕಿ ಅವರ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.
****