ಕನ್ನೇರಿ ಸಿನಿಮಾ ಬುಡಕಟ್ಟು ಜನಾಂಗದ ಕಷ್ಟ ಸುಖ ಬದುಕು-ಬವಣೆಯದ್ದು. ಅದಕ್ಕೆ ತಕ್ಕದಾದ ಹಾಡೊಂದು ರಿಲೀಸ್ ಆಗಿದೆ. ‘ಬೆಟ್ಟ ಕಣಿವೆಗಳ ಹೊಟ್ಟೇಲಿ ಗೂಡು ಕಟ್ಟಿ’ ಅನ್ನೋ ಹಾಡನ್ನ ಹಿರಿಯ ನಟಿ ಶೃತಿ ಬಿಡುಗಡೆ ಮಾಡಿದ್ದಾರೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಜನರಿಂದ ವೀಕ್ಷಣೆ ಪಡೆದಿದೆ.
ಬುಡಕಟ್ಟು ಜನಾಂಗದವರ ಕಷ್ಟ ಸುಖವನ್ನ ಹಾಡಿನ ಸಾಲುಗಳಲ್ಲಿ ಹೆಣೆಯಲಾಗಿದೆ. ಕಾಡಿನ ಜನ.. ಕಾಡಿನ ಮೇಲಿನ ಪ್ರೀತಿ ಈ ಎಲ್ಲವೂ ಕೋಟಿಗಾನಹಳ್ಳಿ ರಾಮಯ್ಯ ಅವರ ಸಾಹಿತ್ಯದಲ್ಲಿ ಕಾಡುತ್ತಿದೆ.ಈ ಹಾಡಿನ ಪದಗಳು ಅಷ್ಟು ಮನಮುಟ್ಟುವಂತಿದೆ.
ಕಾಡಿನ ಜನರಿಗೆ ಕಾಡಿಲ್ಲವೋ ಎಂಬ ಪದ ಬುಡಕಟ್ಟು ಜನಾಂಗದವರ ಇಂದಿನ ಬದುಕನ್ನ ತಿಳಿಸುತ್ತಿದೆ. ನಿಮ್ಗೆಲ್ಲಾ ಮೊದಲೇ ಹೇಳಿದ್ದೀವಿ.. ಇದೊಂದು ನೈಜ ಘಟನೆ ಆಧಾರಿತ ಸಿನಿಮಾ. ಬುಡಕಟ್ಟು ಜನಾಂಗದವರ ಕಷ್ಟ ತಿಳಿಸುವ ಸಿನಿಮಾ. ಮಹಿಳಾ ಪ್ರಧಾನವಾದ ಸಿನಿಮಾ. ಹೀಗಾಗಿ ಅದರ ಕಂಪ್ಲೀಟ್ ಅರ್ಥ, ಸಂಪೂರ್ಣ ಕಷ್ಟ ಈ ಹಾಡೊಂದರಲ್ಲೇ ಮನವರಿಕೆಯಾಗುವಂತಿದೆ.
ಕಾಡಿನ ಮಡಿಲಲ್ಲಿ ಆ ಹಸಿರ ಸಿರಿಯಲ್ಲಿ ತಮ್ಮದೇ ಆದ ನೆಮ್ಮದಿಯ ಜೀವನ ಕಳೆಯುತ್ತಿದ್ದರು. ಆದ್ರೆ ಅವರನ್ನೆಲ್ಲಾ ಒಕ್ಕರಲೆಬ್ಬಿಸಿದಾಗ ಅವರಿಗಾದ ನೋವು.. ಮುಂದೇನು ಎಂಬ ಪ್ರಶ್ನೆ ಅವರನ್ನ ಕಾಡುವಂತೆ ಮಾಡಿತ್ತು. ಇದೇ ಎಳೆಯನ್ನ ಹಿಡಿದುಕೊಂಡು ಕನ್ನೇರಿ ರೆಡಿಯಾಗಿದೆ.
ನೀನಾಸಂ ಮಂಜು ನಿರ್ದೇಶನ ಮಾಡಿದ್ದು, ಕೋಟಿಗಾನಹಳ್ಳಿ ರಾಮಯ್ಯ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಅರ್ಚನಾ ಮಧುಸೂಧನ್ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ್, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತ ಕಲಾವಿದರು ಜೊತೆಯಾಗಿದ್ದಾರೆ.
ಬೆಂಗಳೂರು. ಎಚ್.ಡಿ.ಕೋಟೆ, ಕೋಲಾರ ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಸೆರೆ ಹಿಡಿಯಲಾಗಿದೆ. ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ಎಸ್ ನಾಯಕ್ ಸಂಕಲನ ಚಿತ್ರಕ್ಕಿದೆ.
****