ಅಕ್ಟೋಬರ್ 14 ಕ್ಕೆ ತೆರೆ ಕಂಡ ಸಲಗ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಸಕತ್ ಸೌಂಡ್ ಮಾಡ್ತಿದೆ. ದುನಿಯಾ ವಿಜಯ್ ಅವರು ತುಂಬಾ ಆಸ್ತೆ ವಹಿಸಿ ಮೊದಲ ಬಾರಿಗೆ ನಿರ್ದೇಶಿರುವ ಸಲಗ ಚಿತ್ರ ಇಡೀ ರಾಜ್ಯದಲ್ಲಿ ಯಶಸ್ವಿ ಪ್ರದರ್ಶನ ನೀಡ್ತಿದೆ. ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಸಲಗ ಚಿತ್ರವನ್ನು ನೋಡಲು ಉತ್ಸುಕರಾಗಿದ್ದಾರೆ. ಇಂದು ವಿಜಯ್ ಮತ್ತು ಶ್ರೀಕಾಂತ್ ಅವರು ಉಪ್ಪಿ ಅವರನ್ನು ಭೇಟಿಯಾಗಿದ್ದಾರೆ ಈ ವೇಳೆ ಸಲಗ ಕ್ಕೆ ಶಹಬ್ಬಾಸ್ ಹೇಳಿರುವ ಉಪ್ಪಿ ಶೀಘ್ರದಲ್ಲಿ ಸಲಗ ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಸಲಗ ಚಿತ್ರದ ಪ್ರಿ ರಿಲೀಸ್ ಇವೆಂಟ್ ಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಭಾಗವಹಿಸಿ ಇಡೀ ಚಿತ್ರ ತಂಡಕ್ಕೆ ಶುಭ ಕೋರಿದ್ರು.
ಸ್ವತಃ ವಿಜಯ್ ಮತ್ತು ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್ ಇಡೀ ಸಲಗ ಚಿತ್ರ ತಂಡದ ಜೊತೆಯಲ್ಲಿ ಥಿಯೇಟರ್ ಗಳಿಗೆ ವಿಸಿಟ್ ಮಾಡುವ ಮೂಲಕ ಚಿತ್ರವನ್ನು ಮತ್ತಷ್ಟು ಭರ್ಜರಿಯಾಗಿ ಪ್ರಮೋಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
****