ಗಾಂಧಿನಗರದ ಬಾಕ್ಸಾಫೀಸ್ ಅಲ್ಲಿ ಸಕತ್ ಸೌಂಡ್ ಮಾಡ್ತಿರೋ ಸಲಗ ರಿಲೀಸ್ಗೂ ಮುನ್ನು ಇದ್ದ ಕ್ರೇಜ್ ಅನ್ನು ಬಿಡುಗಡೆ ನಂತರವೂ ಮುಂದುವರೆಸಿದೆ. ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ನಿನ್ನೆ (ಅ22) ಡಾ ಶಿವರಾಜ ಕುಮಾರ್ ಇಡೀ ಚಿತ್ರತಂಡದೊಂದಿಗೆ ಸಲಗ ಚಿತ್ರವನ್ನು ವೀಕ್ಷಿಸಿರುವುದು ಇಡೀ ಚಿತ್ರ ತಂಡಕ್ಕೆ ಸಕತ್ ಖುಷಿ ನೀಡಿದೆ.
ಇದೀಗ ದುನಿಯಾ ವಿಜಯ್ ಆರಾಧಿಸೋ ಗುರುಗಳ ಭಕ್ತಾದಿಗಳು ಸಲಗ ದ ಗೆಲುವಿನ ಸಂಭ್ರಮಾಚರಣೆಯನ್ನು ಮಾಡಿದ್ದಾರೆ. ಪೂಜ್ಯ ಗುರುಗಳಾದ ಶಂಕರ್ ಲಿಂಗರವರ ಭಕ್ತಗಣ ಹಾಗೂ ದುನಿಯಾ ವಿಜಯ್ ಅಭಿಮಾನಿಗಳು ಸಲಗ ಚಿತ್ರದ ಯಶಸ್ಸನ್ನು ಸಂಭ್ರಮಿಸಿದ್ದಾರೆ. ಬೈಕ್ ರ್ಯಾಲಿ ಮೂಲಕ ಸಲಗ ದ ವಿಜಯೋತ್ಸವವನ್ನು ನಡೆಸಿದ್ದಾರೆ ವಿಜಯ್ ಅವರ ಅಭಿಮಾನಿಗಳು. ಸಲಗ ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲ ಸಿನಿಮಾ, ಮೊದಲ ಪ್ರಯತ್ನದಲ್ಲೆ ವಿಜಯ್ ಅವರು ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ನಟನೆಗೂ ಸೈ, ನಿರ್ದೇಶನಕ್ಕೂ ಜೈ ಎಂದಿದ್ದಾರೆ.
****