ಡಾಲಿ ಧನಂಜಯ್ ಅಭಿನಯದ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ರತ್ನನ್ ಪ್ರಪಂಚ ಇಂದು ಓಟಿಟಿಯಲ್ಲಿ ಬಿಡುಗಡೆ ಆಗಿದೆ. ಡಾಲಿ ಧನಂಜಯ್ ಅನ್ನುವ ಒಬ್ಬ ಅದ್ಭುತ ನಟನ ಚಿತ್ರವನ್ನು ಬಿಗ್ ಸ್ಕ್ರೀನ್ ಮೇಲೆ ನೋಡುವಾಸೆ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಆದರೆ ಯಾಕೆ ನಿರ್ಮಾಪಕರು ಈ ಚಿತ್ರವನ್ನು ಹಿರಿ ತೆರೆಯಲ್ಲಿ ಬಿಡುಗಡೆ ಮಾಡದೆ ಓಟಿಟಿಯಲ್ಲಿ ರಿಲೀಸ್ ಮಾಡಲು ಮುಂದಾದರು ಎನ್ನುವ ಪ್ರಶ್ನೆ ಸಹಜವಾಗಿ ಅಭಿಮಾನಿಗಳಲ್ಲಿ ಮೂಡುತ್ತದೆ.
ಕನ್ನಡ ಚಿತ್ರರಂಗದ ಮಟ್ಟಿಗೆ ಸ್ಯಾಂಡಲ್ ವುಡ್ ಸಿನಿಮಾ ಅದರಲ್ಲೂ ಒಬ್ಬ ಸ್ಟಾರ್ ನಟನ ಚಿತ್ರ ಓಟಿಟಿಯಲ್ಲಿ ರಿಲೀಸ್ ಆಗುತ್ತಿರುವುದು ಜೊತೆಗೆ 7-8 ಕೋಟಿಗೆ ಚಿತ್ರ ಮಾರಾಟ ಆಗಿರುವುದು ಒಳ್ಳೆಯ ಬೆಳವಣಿಗೆ ಎಂದುಕೊಳ್ಳಬಹುದು. ಈ ಹಿಂದೆ ಚಿತ್ರ ತಂಡ ರಿಲೀಸ್ ಮಾಡಿದ್ದ ಟ್ರೈಲರ್ ಸಕತ್ ಸೌಂಡ್ ಕೂಡ ಮಾಡಿತ್ತು. ಅಭಿಮಾನಿಗಳು ಟ್ರೈಲರ್ ಅನ್ನು ಮೆಚ್ಚಿಕೊಂಡು ಕಮೆಂಟ್ ಗಳನ್ನು ಮಾಡಿದ್ರು. ಈ ಎಲ್ಲಾ ಪಾಸಿಟೀವ್ ಅಂಶಗಳ ನಡುವೆಯು ರತ್ನನ್ ಪ್ರಪಂಚ ಸಿನಿಮಾವನ್ನು ಬಿಗ್ ಸ್ಕ್ರೀನ್ ಮೇಲೆ ತರದೆ ಓಟಿಟಿ ಗೆ ತರಲು ಕಾರಣ ಏನೆಂದು ಚಿತ್ರ ನಿರ್ಮಾಪಕರಾದ ಕಾರ್ತಿಕ್ ಗೌಡ ಕನ್ನಡ ಪಿಚ್ಚರ್ ನೊಂದಿಗೆ ಹಂಚಿಕೊಂಡಿದ್ದಾರೆ.