ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪ್ರೇಮ್ ಇಂದು ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಜೋಗಿ ಪ್ರೇಮ್ ಅವರು ತಾಯಿ ಪಾತ್ರಗಳಿಗೆ ಕೊಟ್ಟ ಪ್ರಾಮುಖ್ಯತೆಯನ್ನು ಮತ್ತಿನ್ಯಾರು ಕೊಟ್ಟಿಲ್ಲ. ಪ್ರೇಮ್ ನಿರ್ದೇಶನದ ‘ಕರಿಯ’ ಚಿತ್ರದಿಂದ ವಿಲನ್ ಚಿತ್ರದ ವರೆಗೂ ಅಮ್ಮನ ಸೆಂಟಿಮೆಂಟ್ ಗಳದ್ದೆ ಹೈಲೈಟ್.
ಹಾಗೆಯೇ ಪ್ರೇಮ್ ತಮ್ಮ ನಿಜ ಜೀವನದಲ್ಲೂ ಅಮ್ಮನಿಗೆ ಕೊಟ್ಟಿರುವ ಸ್ಥಾನ ದೊಡ್ಡದಿದೆ. ಯಾವ ಮಗನೇ ಆಗಲಿ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲಾ, ತಾಯಿಗೆ ಏನೇ ಉಡುಗೊರೆ ಕೊಟ್ಟರು ಅದು ಕಡಿಮೆಯೇ, ಆದರೆ ನಿರ್ದೇಶಕ ಜೋಗಿ ಪ್ರೇಮ್ ತನ್ನ ಅಮ್ಮನಿಗಾಗಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಜೋಗಿ ಪ್ರೇಮ್ ಅವರು ತಮ್ಮ ತೋಟದಲ್ಲಿ ಅವರ ಅಮ್ಮನ ಗುಡಿ ಕಟ್ಟಿಸಿದ್ದಾರೆ. ಅವರ ಸಿನಿಮಾದಲ್ಲಿ ಯಾಕೆ ತಾಯಿ ಸೆಂಟಿಮೆಂಟ್ ಗೆ ಇಷ್ಟೋಂದು ಪ್ರಾಮುಖ್ಯತೆ ನೀಡ್ತಿದ್ರು ಅಂತ ಇದರಿಂದ ತಿಳಿಯುತ್ತೆ. ಪ್ರೇಮ್ ಒಬ್ಬ ಮಗನಾಗಿ ತನ್ನ ತಾಯಿ ಪ್ರೀತಿಯ ಋಣವನ್ನು ಈ ಮೂಲಕ ತೀರಿಸಲು ಮುಂದಾಗಿದ್ದಾರೆ.
ಪ್ರೇಮ್ ಸದ್ಯ ಏಕ್ ಲವ್ ಯಾ.. ಚಿತ್ರದ ಅಂತಿಮ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಚಿತ್ರ ಡಿಸೆಂಬರ್ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕರಿಯ’ ಚಿತ್ರದ ಮೂಲಕ ಪ್ರೇಮ್ ನಿರ್ದೇಶನಕ್ಕಿಳಿದರು ಈ ಸಿನಿಮಾ 2 ವರ್ಷಕ್ಕೂ ಅಧಿಕ ಪ್ರದರ್ಶನ ಕಾಣುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು ನಂತರ ‘ಎಕ್ಸ್ ಕ್ಯೂಸ್ ಮಿ’ ‘ಜೋಗಿ’ ಹೀಗೆ ಮುಂತಾದ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದರು.
2007ರಲ್ಲಿ ತೆರೆಕಂಡ ‘ಈ ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಾಯಕನಾಗಿ ಅಭಿನಯಿಸಿದರು. ಸಾಕಷ್ಟು ಸಿನಿಮಾ ಹಾಡುಗಳಿಗೆ ಧ್ವನಿಗೂಡಿಸಿದ್ದಾರೆ ಇವರು ಹಾಡಿರುವ ಎಲ್ಲ ಹಾಡುಗಳು ಯೂಟ್ಯೂಬ್ ನಲ್ಲಿ ದಾಖಲೆ ಸೃಷ್ಟಿಸಿವೆ. ಪ್ರೇಮ್ ಕೇವಲ ನಿರ್ದೇಶಕನಾಗಿ ಮಾತ್ರವಲ್ಲದೆ ನಿರ್ಮಾಪಕನಾಗಿ ಹಾಗೂ ನಾಯಕನಟನಾಗಿ ಮತ್ತು ಗಾಯಕನಾಗಿ ಹೀಗೆ ಎಲ್ಲ ವಿಭಾಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ.
****