16.9 C
Bengaluru
Tuesday, February 7, 2023
spot_img

ಹುಟ್ಟುಹಬ್ಬ ಸಂಭ್ರಮದಲ್ಲಿ ಜೋಗಿ ಪ್ರೇಮ್..!

ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ಜೋಗಿ ಪ್ರೇಮ್ ಅವರಿಗೆ ಇಂದು (ಅ.22) ಹುಟ್ಟುಹಬ್ಬದ ಸಂಭ್ರಮ. ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದರು ಆದರೆ ಈ ಬಾರಿ ಅದು ಸಾದ್ಯವಾಗುತ್ತಿಲ್ಲಾ. ಸದ್ಯ ಪ್ರೇಮ್ ಅವರು ಏಕ್ ಲವ್ ಯಾ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯೂಸಿಯಾಗಿರುವುದರಿಂದ ಅವರು ಅಭಿಮಾನಿಗಳಿಂದ ದೂರ ಉಳಿಯಬೇಕಾಗಿದೆ ಇದರಿಂದ ತಮ್ಮ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಜೋಗಿ ಪ್ರೇಮ್ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದರು. ದೂರದಿಂದಲೇ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ್ದರು.

ಪ್ರತಿ ಬಾರಿ ನನ್ನ ಅನ್ನದಾತರು, ಸ್ನೇಹಿತರು ಹಾಗೂ ಬಂಧು-ಬಳಗದವರು ಬಂದು ಶುಭ ಹಾರೈಸುತ್ತಿದ್ರಿ. ಆದರೆ, ಈ ಬಾರಿ ನಾನು ಮನೆಯಲ್ಲಿ ಇರುವುದಿಲ್ಲ. ಯಾಕೆಂದರೆ ಮುಂಬೈನಲ್ಲಿ ‘ಏಕ್​ ಲವ್​ ಯಾ’ ಸಿನಿಮಾ ಕೆಲಸ ನಡೆಯುತ್ತಿದೆ. ಹಾಗಾಗಿ ತಾವು ಯಾರೂ ಕೂಡ ನನ್ನ ಮನೆ ಬಳಿ ಬರುವುದಾಗಲಿ, ಬಂದು ಕಾಯುವುದಾಗಲಿ ಮಾಡಬೇಡಿ ಅಂತ ಪ್ರೀತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ. ಎಲ್ಲೇ ಇದ್ದರೂ ದೂರದಿಂದ ನನಗೆ ಆಶೀರ್ವಾದ ಮಾಡಿ’ ಎಂದು ಪ್ರೇಮ್​ ಮನವಿ ಮಾಡಿದ್ದಾರೆ.

ಜೋಗಿ ಪ್ರೇಮ್ ಅವರ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ನಟ ನಟಿಯರು, ನಿರ್ದೇಶಕರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles