ಮೇಘನಾ ರಾಜ್ 2020 ರಲ್ಲಿ ತನ್ನ ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ಅಪಾರ ನೋವಿನಲಿದ್ದರು.ನಂತರ ಮಗುವಿನ ಜನನದಿಂದ ಕೊಂಚ ಅವರ ನೋವು ಕಡಿಮೆತು. ಈಗ ರಾಯನ್ ರಾಜ್ ಒಂದು ವರ್ಷ ಪೂರೈಸಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ.ಪುತ್ರನ ಹುಟ್ಟುಹಬ್ಬದ ಪ್ರಯುಕ್ತ ಮೇಘನಾ ಮನೆಯಲ್ಲಿ ಸಡಗರ. ಇದರ ಜೊತೆಗೆ ಮೇಘನಾ ಅವರು ಮತ್ತೆ ಸಿನಿಮಾದಲ್ಲಿ ನಟಿಸಲು ಮುಂದಾಗುತ್ತಿರುವುದು ಮತ್ತೊಂದು ವಿಶೇಷ.
ಹೌದು ಥ್ರಿಲ್ಲರ್ ಸಿನಿಮಾ ಮೂಲಕ ನಟಿ ಮೇಘನಾ ರಾಜ್ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ವಿಶಾಲ್ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಮೇಘನಾರಾಜ್ ಅಭಿನಯಿಸಲಿದ್ದಾರೆ.
ಹ್ಯಾಪಿ ನ್ಯೂ ಇಯರ್ ಮತ್ತು ಫ್ರೆಂಚ್ ಬಿರಿಯಾನಿ ಚಿತ್ರಗಳ ಮೂಲಕ ನಿರ್ದೇಶಕರಾಗಿ ಛಾಪು ಮೂಡಿಸಿರುವ ಪನ್ನಗಾಭರಣ, ಈ ಸಿನಿಮಾ ಮೂಲಕ ನಿರ್ಮಾಪಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.ಕ್ರೈಮ್ ಥ್ರಿಲ್ಲರ್ ನಲ್ಲಿ ನಾಲ್ಕು ಪ್ರಮುಖ ಪಾತ್ರಗಳಿದ್ದು ಮೇಘನಾ ಪ್ರಾಜೆಕ್ಟ್ ನಲ್ಲಿ ಮೊದಲಿಗರಾಗಿದ್ದಾರೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಸದ್ಯ ನಿರ್ದೇಶಕರು ಉಳಿದ ಕಲಾವಿದರನ್ನು ಅಂತಿಮಗೊಳಿಸುತ್ತಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಪ್ಲಾನ್ ಮಾಡಿದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಲಿದ್ದಾರೆ.
****