ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡು ಜೋರು ಸದ್ದು ಮಾಡ್ತಿರೋ ಸಲಗ, ಮೇಕಿಂಗ್, ಮ್ಯೂಸಿಕ್ , ಹಾಡು, ಡೈಲಾಗ್ ಮತ್ತು ಕಾಸ್ಟಿಂಗ್ ನಲ್ಲಿ ಹವಾ ಕ್ರಿಯೇಟ್ ಮಾಡಿದೆ. ಮಾಸ್ ಆಡಿಯನ್ಸ್ ಗೆ ಕಿಕ್ ಕೊಟ್ಟಿರೋ ಸಲಗ ಈಗ ಮತ್ತೊಂದು ಕಿಕ್ ಕೊಡಲು ಮುಂದಾಗಿದೆ. ಅದೇನಂದ್ರೆ ಹ್ಯಾಟ್ರಿಕ್ ಹೀರೋ ಶಿವಣ್ಣ ನಾಳೆ (ಅ.22) ಸಲಗ ಸಿನಿಮಾವನ್ನು ವೀಕ್ಷಿಸಲಿದ್ದಾರೆ. ಶಿವಣ್ಣ ಸಲಗ ಚಿತ್ರ ನೊಡ್ತಾರೆ ಎಂಬ ಸುದ್ದಿ ತಿಳಿದಿದ್ದೇ ತಡ ಸಲಗ ಚಿತ್ರ ತಂಡ ಶಿವಣ್ಣ ಅವರಿಗೆ ಸಿನಿಮಾ ತೋರಿಸುವ ಉತ್ಸಾಹದಲ್ಲಿದೆ.
ಇತ್ತೀಚೆಗೆ ಪ್ರಿ ರಿಲೀಸ್ ಇವೆಂಟ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಭಾಗವಹಿಸಿ ಸಲಗ ಚಿತ್ರ ತಂಡಕ್ಕೆ ಶುಭ ಕೋರಿದ್ದರು ಮತ್ತು ದುನಿಯಾ ವಿಜಯ್ ಅವರ ನಿರ್ದೇಶನದಲ್ಲಿ ವಿಭಿನ್ನಪಾತ್ರದಲ್ಲಿ ಅಭಿನಯಿಸುವ ಆಸೆಯನ್ನು ಕೂಡ ವ್ಯಕ್ತಪಡಿಸಿದ್ದರು. ಈಗ ದುನಿಯಾ ವಿಜಯ್ ಅವರ ಮೊದಲ ನಿರ್ದೇಶನದ ಸಲಗ ಚಿತ್ರವನ್ನು ಖುದ್ದು ಶಿವಣ್ಣ ಅವರೆ ವೀಕ್ಷಿಸುತ್ತಿರುವುದು ಇಡೀ ತಂಡಕ್ಕೆ ಸಕತ್ ಖುಷಿ ನೀಡಿದೆ. ಒರಾಯನ್ ಮಾಲ್ ನ ಪಿವಿಆರ್ ನಲ್ಲಿ ಮಧ್ಯಾಹ್ನ 1 ಗಂಟೆಗೆ ಇಡೀ ಸಲಗ ತಂಡದೊಂದಿಗೆ ಶಿವರಾಜ್ ಕುಮಾರ್ ಸಿನಿಮಾ ವೀಕ್ಷಿಸಲಿದ್ದಾರೆ.
ಈ ಹಿಂದೆ ಶಿವಣ್ಣ ಅಭಿನಯಿಸಿದ್ದ ಬ್ಲಾಕ್ ಬಸ್ಟರ್ ಸಿನಿಮಾ ಟಗರು ಗೆ ನಿರ್ಮಾಪಕರಾಗಿದ್ದ ಕೆ.ಪಿ.ಶ್ರೀಕಾಂತ್ ಅವರೇ ಈ ಚಿತ್ರಕ್ಕೆ ಹಣ ಹೂಡಿದ್ದಾರೆ ಹಾಗಾಗಿ ಮೊದಲಿನಿಂದಲೂ ಶಿವಣ್ಣ ಮತ್ತು ಶ್ರೀಕಾಂತ್ ಇಬ್ಬರೂ ಆತ್ಮೀಯರಾಗಿದ್ದು ಸಲಗ ಸಿನಿಮಾ ನೋಡಲು ಇದೂ ಒಂದು ಕಾರಣ ಎನ್ನಬಹುದು.
ಇದೇ ಅಕ್ಟೋಬರ್ 29 ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ಭಜರಂಗಿ 2 ಬಿಡುಗಡೆ ಯಾಗಲಿದ್ದು, ಇಡೀ ಗಾಂಧಿನಗರ ಅ 29 ರತ್ತ ನೋಡುತ್ತಿದೆ.

****