ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಬಿಗ್ ಬಜೆಟ್ ನ ಸ್ಟಾರ್ಸ್ ನಟರ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸೌಂಡ್ ಮಾಡುತ್ತಿವೆ. ಒಂದ್ ಕಡೆ ಅ.14 ಕ್ಕೆ ಬಿಡುಗಡೆ ಆದ ಸಲಗ ಚಿತ್ರದ ಡಿಸ್ಟ್ರಿಬ್ಯೂಟರ್ಸ್ ಗಳು ಗಲ್ಲಾ ಪೆಟ್ಟಿಯ ಗಳಿಕೆಯ ಬಗ್ಗೆ ಎಲ್ಲೂ ಗುಟ್ಟು ಬಿಟ್ಟುಕೊಡದೆ ಬಹಳ ಸೀಕ್ರೇಟ್ ಮಾಡ್ತಿದ್ರೆ ಮತ್ತೊಂದ್ ಕಡೆ ತೆರೆ ಕಂಡ ನಾಲ್ಕೇ ದಿನಕ್ಕೆ 40.5 ಕೋಟಿ ಕಲೆಕ್ಷನ್ ಮಾಡಿಕೊಂಡಿದೆ ಎನ್ನುತ್ತಿದೆ ಕೋಟಿಗೊಬ್ಬ 3 ಚಿತ್ರ ತಂಡ. ಇದೆಲ್ಲದರ ಜೊತೆ ರೇಸ್ ನಲ್ಲಿದ್ದು ಸೈಲೆಂಟಾಗಿ ತನ್ನ ಶೋಗಳನ್ನು ಹೆಚ್ಚು ಮಾಡಿಕೊಳ್ಳುತ್ತಿರುವ ಮತ್ತೊಂದು ಚಿತ್ರ ‘ನಿನ್ನ ಸನಿಹಕೆ’ ಕೂಡ ಕಲೆಕ್ಷನ್ ವಿಷಯದಲ್ಲಿ ಇವೆರಡು ಚಿತ್ರಕ್ಕೆ ಹೋಲಿಸಿದರೆ ಸ್ವಲ್ಪ ಹಿಂದೆ ಇದೆ ಆದ್ರೆ ತನ್ನದೇ ವರ್ಗದ ಪ್ರೇಕ್ಷಕರನ್ನ ನಿಧಾನವಾಗಿ ತನ್ನತ್ತ ಸೆಳೆಯುವಲ್ಲಿ ಯಶಸ್ವೀಯಾಗಿದೆ.
ಅ.8 ಕ್ಕೆ ರಿಲೀಸ್ ಆದ ‘ನಿನ್ನ ಸನಿಹಕೆ’ ಚಿತ್ರ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅತ್ಯುತ್ತಮ ಪ್ರಶಂಸೆಯನ್ನು ಪಡೆದುಕೊಂಡಿದೆ. ಮೊದಲ ಬಾರಿಗೆ ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಾಯಕಿಯಾಗಿ ಮೊದಲ ಬಾರಿ ನಟಿದ್ದಾರೆ ಎಂಬ ವಿಶೇಷಣವನ್ನು ಪಕ್ಕಕಿಟ್ಟರು, ಸೂರಜ್ ಗೌಡ ಅವರ ನಿರ್ದೇಶನ ಮತ್ತು ಎಲ್ಲಾ ಕಲಾವಿದರ ಅಭಿನಯ ಚಿತ್ರ ಪ್ರೇಕ್ಷಕನಿಗೆ ಇನ್ನಷ್ಟು ಸನಿಹವಾಗಲು ಕಾರಣವಾಗಿದೆ.
ಈಗ ನಿನ್ನ ಸನಿಹಕೆ ಚಿತ್ರ ಮೂರನೇ ವಾರಕ್ಕೆ ಮತ್ತಷ್ಟು ಶೋಗಳನ್ನು ಹೆಚ್ಚಿಸಿಕೊಂಡು ಸೈಲೆಂಟಾಗಿ ಮ್ಯಾರಥಾನ್ ಓಟ ನಡಿಸಿದೆ. ಇದರಿಂದ ಚಿತ್ರ ತಂಡವೂ ಕೂಡ ಖುಷಿಯಾಗಿದೆ. ಸ್ಟಾರ್ ನಟರ ಚಿತ್ರದ ಅಬ್ಬರದ ನಡುವೆಯೂ ನಿನ್ನ ಸನಿಹಕೆ ಫ್ಯಾಮಿಲಿ, ಯೂತ್ಸ್ ಮತ್ತು ಲವ್ ಕಪಲ್ಸ್ ಗಳನ್ನು ತನ್ನ ಕಡೆಗೆ ಸೆಳೆಯುವಲ್ಲಿ ಯಶಸ್ವಿಯೂ ಆಗಿದೆ. ಈ ಹಿಂದೆ ರಂಗಿ-ತರಂಗ, ‘ಲವ್ ಮಾಕ್ ಟೈಲ್’, ದಿಯಾ ಸಿನಿಮಾಗಳೂ ಸಹ ಇದೇ ರೀತಿ ತನ್ನ ಗ್ರಾಫ್ ಅನ್ನು ಹೆಚ್ಚಿಸಕೊಂಡ ಉದಾಹರಣೆ ಸ್ಯಾಂಡಲ್ ವುಡ್ ನಲ್ಲಿದೆ. ಈ ಬಗ್ಗೆ ಕನ್ನಡ ಪಿಚ್ಚರ್ ಜೊತೆ ನಿರ್ದೇಶಕ ಸೂರಜ್ ಗೌಡ ಅವರು ಚಿತ್ರದ ಯಶಸ್ಸಿನ ಕುರಿತು ಮಾತನಾಡಿದ್ದಾರೆ.