22.9 C
Bengaluru
Sunday, March 26, 2023
spot_img

ಸಲಗ ‘ಗಲ್ಲಾಪೆಟ್ಟಿ’ ಗಳಿಕೆಯ ಗುಟ್ಟು ಬಿಟ್ಟು ಕೊಡದ ಡಿಸ್ಟ್ರಿಬ್ಯೂಟರ್ಸ್..!

ದುನಿಯಾ’ ವಿಜಯ್ ನಟಿಸಿ, ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ ‘ಸಲಗ’. ಕಳೆದ ಗುರುವಾರ (ಅ.14) ಈ ಸಿನಿಮಾ ರಾಜ್ಯಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ದಸರಾ ರಜೆ ಇದ್ದಿದ್ದು ಸಿನಿಮಾಕ್ಕೆ ವರದಾನವಾಗಿದೆ. ಇಂದಿಗೆ ಸಿನಿಮಾ ತೆರೆಕಂಡು 6 ದಿನಗಳಾಯ್ತು. ಆದರೆ, ಈವರೆಗೂ ಸಿನಿಮಾ ತಂಡ ಅಧಿಕೃತವಾಗಿ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಹಾಗಾದರೆ, ‘ಸಲಗ’ ಸಿನಿಮಾ ಮಾಡಿರುವ ಗಳಿಕೆ ಎಷ್ಟು? ಈ ಬಗ್ಗೆ ವಿತರಕರು ಏನಂತಾರೆ? ಮುಂದೆ ಓದಿ.

ಜಯಣ್ಣ ಪಾಲಿಗೆ ‘ಸಲಗ’ ವಿತರಣೆ
‘ದುನಿಯಾ’ ವಿಜಯ್ ಮತ್ತು ‘ಡಾಲಿ’ ಧನಂಜಯ್ ಕಾಂಬಿನೇಷನ್‌ನ ‘ಸಲಗ’ ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡಿರುವುದು ಜಯಣ್ಣ ಮತ್ತು ಜಗದೀಶ್. ಚಿತ್ರದ ಕಲೆಕ್ಷನ್ ಎಷ್ಟು ಎಂದು ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ಗೆ ಕೇಳಿದರೆ, ವಿತರಕರ ಕಡೆಗೆ ಬೆರಳು ತೋರಿಸುತ್ತಾರೆ. ಈ ಬಗ್ಗೆ ಮಾಹಿತಿ ನೀಡುವ ವಿತರಕರಲ್ಲಿ ಒಬ್ಬರಾದ ಜಗದೀಶ್‌, ‘ಈ ಗುರುವಾರಕ್ಕೆ (ಅ.21) ಒಂದು ವಾರ ಕಂಪ್ಲೀಟ್ ಆಗುತ್ತದೆ. ಅಂದು ನಾವು ಪ್ರೆಸ್‌ಮೀಟ್ ಮಾಡಿ, ಚಿತ್ರದ ಕಲೆಕ್ಷನ್‌ ಏನು ಎಂಬುದನ್ನು ಹೇಳಬೇಕು ಎಂದು ನಾನು ಮತ್ತು ನಮ್ಮ ಜಯಣ್ಣ ನಿರ್ಧಾರ ಮಾಡಿದ್ದೇವೆ. ರಾಜ್ಯಾದ್ಯಂತ 344 ಥಿಯೇಟರ್‌ನಲ್ಲಿ ಸಲಗ ಸಿನಿಮಾ ಓಡ್ತಿದೆ. ಇದಕ್ಕೆ ಹೊಸದಾಗಿ 40 ಥಿಯೇಟರ್ ಸೇರಿಕೊಳ್ಳಲಿದೆ. ಸದ್ಯ 344 ಥಿಯೇಟರ್‌ಗಳಲ್ಲೂ ಸಿನಿಮಾ ಹೌಸ್‌ಫುಲ್ ಕಲೆಕ್ಷನ್ ಹೋಗ್ತಾ ಇದೆ. ಮೊದಲ ವಾರಕ್ಕಿಂತ ಎರಡನೇ ವಾರವೇ ಜಾಸ್ತಿ ಥಿಯೇಟರ್ ಸಿಗುತ್ತಿವೆ. ಇವಿಷ್ಟು ಥಿಯೇಟರ್‌ನಲ್ಲಿ ದಿನಕ್ಕೆ 4 ಶೋ ಹೌಸ್‌ಫುಲ್‌ ಆಗ್ತಿದೆ. ನೀವೇ ಲೆಕ್ಕ ಹಾಕಿಕೊಳ್ಳಬಹುದು. ಇದು ದುನಿಯಾ ವಿಜಯ್ ಅವರ ಕರಿಯರ್‌ನಲ್ಲೇ ದೊಡ್ಡ ದಾಖಲೆ’ ಎನ್ನುತ್ತಾರೆ.

ಸದ್ಯ ‘ದುನಿಯಾ’ ವಿಜಯ್‌ ಅವರು ಸಖತ್ ಖುಷಿಯಲ್ಲಿದ್ದಾರೆ. ಬಹಳ ದಿನಗಳ ಬಳಿಕ ಅವರ ಸಿನಿಮಾವೊಂದು ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡರೆ, ಅವರ ಚೊಚ್ಚಲ ನಿರ್ದೇಶನಕ್ಕೂ ಪ್ರೇಕ್ಷಕ ಜೈ ಎಂದಿದ್ದಾನೆ. ‘ಇಂಥದ್ದೊಂದು ಸಕ್ಸಸ್ ನನಗೆ ಬೇಕಿತ್ತು’ ಎಂದು ಅವರು ಕೂಡ ಹೇಳಿದ್ದಾರೆ.

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles