ಈ ಹಿಂದೆ ‘ದಯವಿಟ್ಟು ಗಮನಿಸಿ’ ಎನ್ನುವ ವಿಭಿನ್ನ ಸಿನಿಮಾ ಮಾಡಿ ಸೈ ಎನ್ನಿಸಿಕೊಂಡಿದ್ದ ರೋಹಿತ್ ಪದಕಿ ಎನ್ನುವ ನಿರ್ದೇಶಕ ಮೂರು ವರ್ಷದ ಗ್ಯಾಪ್ ನಲ್ಲಿ ಸ್ಯಾಂಡಲ್ ವುಡ್ ಗೆ ಮತ್ತೊಂದು ಸಿನಿಮಾವನ್ನ ನೀಡಿದ್ದಾರೆ. ಟಗರು ಡಾಲಿ ಖ್ಯಾತಿಯ ಧನಂಜಯ್ ಅವರು ನಾಯಕನಾಗಿ ಅಭಿನಯಿಸಿರುವ ‘ರತ್ನನ್ ಪ್ರಪಂಚ’ ಸಿನಿಮಾವನ್ನು ಕೊಟ್ಟಿದ್ದಾರೆ ನಿರ್ದೇಶಕ ರೋಹಿತ್ ಪದಕಿ.
ರತ್ನನ್ ಪ್ರಪಂಚ ಚಿತ್ರ ಇದೇ ಶುಕ್ರವಾರ (ಅ 22) ಓಟಿಟಿಯಲ್ಲಿ ಬಿಡುಗಡೆ ಆಗಲಿದ್ದು ಇದು ಎಲ್ಲರ ಸಿನಿಮಾ ಆಗಲಿದೆ ಎನ್ನುತ್ತಾರೆ ನಿರ್ದೇಶಕ ರೋಹಿತ್ ಪದಕಿ. ಈಗಾಗಲೆ ಟ್ರೈಲರ್ ನಲ್ಲೆ ಫುಲ್ ಕಾಮಿಡಿ ಕಿಕ್ ನೀಡಿ ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ರತ್ನನ್ ಪ್ರಪಂಚದ ಬಗ್ಗೆ ಕನ್ನಡ ಪಿಚ್ಚರ್ ಜೊತೆ ಮಾತನಾಡಿದ್ದಾರೆ ನಿರ್ದೇಶಕ ರೋಹಿತ್ ಪದಕಿ.