ಸ್ಯಾಂಡಲ್ ವುಡ್ ನಲ್ಲಿ 2010 ತೆರೆಕಂಡು ಕಮಾಲ್ ಮಾಡಿದ್ದ ಪೃಥ್ವಿ ಸಿನಿಮಾವನ್ನು ಜಾಕೋಬ್ ವರ್ಗೀಸ್ ನಿರ್ದೇಶಿಸಿದ್ರು, ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ನಟಿಸಿದ್ರು. ಪುನೀತ್ ನಟನೆಯ ಸಿನಿಮಾಗಳಲ್ಲಿ ಪೃಥ್ವಿ ಅತ್ಯುತ್ತಮ ಸಿನಿಮಾವಾಗಿತ್ತು, 11 ವರ್ಷಗಳ ನಂತರ ಮತ್ತೆ ಪುನೀತ್ ಮತ್ತು ಜಾಕೋಬ್ ವರ್ಗೀಸ್ ಮತ್ತೆ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ನಲ್ಲಿ ಸಿನಿಮಾ ತಯಾರಾಗಲಿದೆ ಎಂದು ತಿಳಿದು ಬಂದಿದೆ, ಪುನೀತ್ ಅವರ ಕೈಯ್ಯಲ್ಲಿರುವ ಎಲ್ಲಾ ಸಿನಿಮಾಗಳ ಶೂಟಿಂಗ್ ಮುಗಿದ ನಂತರ ಹೊಸ ಸಿನಿಮಾಗೆ ಕೈ ಹಾಕಲಿದ್ದಾರೆ.ಇಬ್ಬರು ಈ ಸಂಬಂಧ ಈಗಾಗಲೇ ಚರ್ಚಿಸಿದ್ದು ಕಥೆ ಓಕೆ ಆಗಿದೆ, ನಿರ್ದೇಶಕ ಜಾಕೋಬ್ ವರ್ಗೀಸ್ ಕಲಾವಿದರು ಮತ್ತು ತಾಂತ್ರಿಕ ಸಿಬ್ಬಂದಿ ಆಯ್ಕೆಯಲ್ಲಿ ನಿರತರಾಗಿದ್ದಾರೆ. 2022ರ ಫೆಬ್ರವರಿಯಲ್ಲಿ ಶೂಟಿಂಗ್ ಆರಂಭಿಸಲು ಚಿತ್ರತಂಡ ಯೋಜಿಸಿದೆ, ಶೀಘ್ರದಲ್ಲೇ ಟೈಟಲ್ ಘೋಷಿಸಲಾಗುವುದು.
ಪುನೀತ್ ಸದ್ಯ ಚೇತನ್ ಕುಮಾರ್ ಅವರ ಜೇಮ್ಸ್, ಪವನ್ ಕುಮಾರ್ ನಿರ್ದೇಶನದ ದ್ವಿತ್ವದಲ್ಲಿ ನಟಿಸುತ್ತಿದ್ದಾರೆ. ದಿನಕರ್ ತೂಗುದೀಪ್ ಮತ್ತು ಸಂತೋಷ್ ಆನಂದರಾಮ್ ನಿರ್ದೇಶನದ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.
****