22.9 C
Bengaluru
Sunday, March 26, 2023
spot_img

20ನೇ ವರ್ಷಕ್ಕೆ ಕಾಲಿಟ್ಟ ನಟ ಸುದೀಪ್-ಪ್ರಿಯ ದಾಂಪತ್ಯ

ಚಿತ್ರನಟ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ದಂಪತಿ 20ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಇತ್ತ ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶುಭ ಹಾರೈಸಿದ್ದಾರೆ.

ಸುದೀಪ್‌ -ಪ್ರಿಯಾ 2001ರ ಅಕ್ಟೋಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ 17 ವರ್ಷದ (ಸಾನ್ವಿ) ಮಗಳಿದ್ದಾಳೆ. ಇದೀಗ ಸುದೀಪ್ ಮತ್ತು ಪ್ರಿಯಾ ಅವರು ಮದುವೆಯಾಗಿ 20 ವರ್ಷ ಕಳೆದಿದ್ದು, ಈ ಹಿನ್ನೆಲೆ ಸಾನ್ವಿ ಸೇರಿದಂತೆ ಅಭಿಮಾನಿಗಳು ಸುದೀಪ್‌ ದಂಪತಿಗೆ ಶುಭ ಕೋರಿದ್ದಾರೆ.

ಈ ಬಾರಿ ಕೊರೊನಾ ಕಾರಣದಿಂದಾಗಿ ಸುದೀಪ್‌ ದಂಪತಿ ವಿವಾಹ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಿಕೊಂಡಿದ್ದು, ಇದೀಗ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles