ಅಕ್ಟೋಬರ್ 14ರಂದು ರಿಲೀಸ್ ಆದ ‘ಸಲಗ’ ಮತ್ತು ಶುಕ್ರವಾರ (ಅಕ್ಟೋಬರ್ 15) ರಿಲೀಸ್ ಆದ ‘ಕೋಟಿಗೊಬ್ಬ 3’ಗೆ ಭಾರೀ ಹೊಡೆತ ಕೊಟ್ಟಿದೆ. ಕನ್ನಡ ರಾಕರ್ಸ್ ಹೆಸರಲ್ಲಿ ಕನ್ನಡದ ಹೊಚ್ಚಹೊಸ ಚಿತ್ರಗಳು ಪೈರಸಿ ಆಗಿದೆ. ಎರಡೂ ಚಿತ್ರಗಳನ್ನು ಪೈರಸಿ ಮಾಡಿ ಟೆಲಿಗ್ರಾಂನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ಬಗ್ಗೆ ಚಿತ್ರತಂಡ ಯಾವ ರೀತಿಯ ಕ್ರಮ ಕೈಗೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
‘ಕೋಟಿಗೊಬ್ಬ 3’ ರಿಲೀಸ್ಗೂ ಮೊದಲೇ ಪೈರಸಿ ಬಗ್ಗೆ ಸಂದೇಶವೊಂದು ಟೆಲಿಗ್ರಾಮ್ನಲ್ಲಿ ಹರಿದಾಡಿತ್ತು. ‘ನೀವು ‘ಕೋಟಿಗೊಬ್ಬ 3′ ಸಿನಿಮಾ ಡೌನ್ಲೋಡ್ ಮಾಡಲು ನಮ್ಮ ಚಾನೆಲ್ಗೆ ಜಾಯಿನ್ ಆಗಿ’ ಎಂಬಿತ್ಯಾದಿ ಸಂದೇಶ ವೈರಲ್ ಆಗಿದೆ. ಇದು ಚಿತ್ರತಂಡದ ಆತಂಕಕ್ಕೆ ಕಾರಣವಾಗಿತ್ತು.
ಪೈರಸಿ ತಡೆಯುವ ಉದ್ದೇಶದಿಂದ ‘ಸಲಗ’ ಸಿನಿಮಾ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ‘ಭಜರಂಗಿ-2’ ಸಿನಿಮಾ ನಿರ್ಮಾಪಕ ಜಯಣ್ಣ, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್, ಪದಾಧಿಕಾರಿಗಳಾದ ರಮೇಶ್, ಗಣೇಶ್ ಅವರು ಬೆಂಗಳೂರು ಸಿಟಿ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಮನವಿ ಸಲ್ಲಿಕೆ ಮಾಡಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ.
ಇತ್ತೀಚೆಗೆ ಪೈರಸಿ ಬಗ್ಗೆ ಮಾತನಾಡಿದ್ದರು. ‘ಅವರ ಬಗ್ಗೆ ಏನು ಮಾತಾಡೋಣ? ಕೋವಿಡ್ಗೆ ಭಯ ಬೀಳದೇ ಬದುಕಿ ಬಂದಿದ್ದೇನೆ. ಇದ್ಯಾವುದು ಕಿತ್ತೋಗಿರೋ ಪೈರಸಿಗೆ ಏಕೆ ಭಯ ಬೀಳಲಿ? ಪೈರಸಿ ಮಾಡಲಿ ಬಿಡಿ. ಅದಕ್ಕೆಲ್ಲ ನಾನು ಹೆದರಲ್ಲ. ಮನೆಯವರೇ ಕಳ್ಳರನ್ನು ಒಳಗೆ ಬಿಟ್ಟಾಗ ನಾವು ಕಳ್ಳರಿಗೆ ಬಯ್ಯೋದು ತಪ್ಪಾಗುತ್ತದೆ’ ಎಂದು ಮಾರ್ಮಿಕವಾಗಿ ಮಾತನಾಡಿದ್ದರು.
****