ಇಂದು ಕನ್ನಡ ಚಿತ್ರಪ್ರೇಮಿಗಳಿಗೆ ಸಂಭ್ರಮದ ದಿನವಾಗಿತ್ತು. ಆಯುಧ ಪೂಜೆಯ ದಿನದಂದು ಕನ್ನಡದ ಎರಡು ಬಿಗ್ ಬಜೆಟ್ ಚಿತ್ರಗಳಾದ ‘ಕೋಟಿಗೊಬ್ಬ 3’ ಹಾಗೂ ‘ಸಲಗ’ ಚಿತ್ರಗಳು ಬಿಡುಗಡೆಯಾಗುವುದಾಗಿ ಘೋಷಿಸಿದ್ದವು. ಬಹು ತಾರಾಗಣದ ಈ ಚಿತ್ರಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದವು. ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ‘ಸಲಗ’ ಚಿತ್ರಗಳನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಲು ಸಿದ್ಧತೆಯನ್ನೂ ನಡೆಸಿದ್ದರು. ಆದರೆ ಈ ಪೈಕಿ ‘ಸಲಗ’ ಮಾತ್ರ ಬಿಡುಗಡೆಯಾಗಿದ್ದು, ‘ಕೋಟಿಗೊಬ್ಬ 3’ ಅನಿವಾರ್ಯ ಕಾರಣದಿಂದ ನಾಳೆ ಬಿಡುಗಡೆಯಾಗಲಿದೆ.
ನಿರ್ಮಾಪಕ ಸೂರಪ್ಪ ಬಾಬು ಈ ಕುರಿತು ಮಾಹಿತಿ ನೀಡಿದ್ದು, ನಾಳೆ (ಶುಕ್ರವಾರ) ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಬಿಗ್ ಸ್ಕ್ರೀನ್ನಲ್ಲಿ ಕಿಚ್ಚನನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ. ಇತ್ತ ದುನಿಯಾ ವಿಜಯ್ ನಟನೆಯ ಸಲಗ ಫಸ್ಟ್ ಶೋ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
****