ಒಡೆಯರ್ ಮೂವೀಸ್ ನಿರ್ಮಾಣದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಸಿನಿಮಾ ಪ್ರತಿಷ್ಟಿತ 20ನೇ ಢಾಕಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಹಲವು ಸುತ್ತಿನ ಸ್ಪರ್ಧೆಗಳಲ್ಲಿ ಇತರೆ ಭಾಷೆಗಳ ಚಿತ್ರಕ್ಕೆ ಪೈಪೋಟಿ ನೀಡಿ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಯ್ಕೆ ಆಗಿರುವುದು ಇಡೀ ಚಿತ್ರ ತಂಡಕ್ಕೆ ಸಂತಸ ತಂದಿದೆ. ಇದೇ ರೀತಿ ಬೇರೆ ಬೇರೆ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿರುವ ಡೊಳ್ಳು ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.
ಡೊಳ್ಳು ಹೆಸರೇ ಹೇಳುವಂತೆ ಇದೊಂದು ಜಾನಪದ ನೃತ್ಯವಾದ ಡೊಳ್ಳು ಕುಣಿತದ ಬಗ್ಗೆಗಿನ ಸಿನಿಮಾ. ಕಿರುತೆರೆ ನಟ ಕಾರ್ತಿಕ್ ಮಹೇಶ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು . ನಿಧಿ ಹೆಗ್ಡೆ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಮತ್ತು ಶರಣ್ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶ್ರಿನಿಧಿ ಡಿಎಸ್ ಚಿತ್ರಕಥೆ ಬರೆದಿದ್ದು, ಅನಂತ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಸ್ ಕಲಾಥಿ ಅವರ ಛಾಯಾಗ್ರಹಣ. ಬಿಎಸ್ ಕೆಂಪರಾಜು ಅವರ ಸಂಕಲವಿದೆ.
****