ನಿರ್ದೇಶಕ ಎ.ಎಂ.ಆರ್ ರಮೇಶ್ ಅವ್ರ ಮಗಳು ಮೈಸೂರಿನ ರಂಗಾಯಣದಲ್ಲಿ ಕಲಿತು ಹಿರಿತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ
ಸ್ಯಾಂಡಲ್ ವುಡ್ ನ ಭರವಸೆಯ ನಿರ್ದೇಶಕರೆಂದೇ ಖ್ಯಾತಿ ಪಡೆದಿರುವ ಕನ್ನಡಲ್ಲಿ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿ ಸೈ ಎನ್ನಿಸಿಕೊಂಡಿರುವ ನಿರ್ದೇಶಕ ಎಎಂಆರ್ ರಮೇಶ್ ಅವರ ಪುತ್ರಿ ಈಗ ಸ್ಯಾಂಡಲ್ ವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ರಮೇಶ್ ಅವರು ಕನ್ನಡದಲ್ಲಿ ಸೈನೆಡ್, ಅಟ್ಟಹಾಸ, ಆಸ್ಪೋಟ, ಮಿಂಚಿನ ಓಟ, ಪೋಲೀಸ್ ಕ್ವಾಟರ್ಸ್ ಎಂಬ ಸದಭಿರುಚಿಯ ಚಿತ್ರಗಳನ್ನು ನೀಡುವುದರ ಜೊತೆಗೆ, ಕಾಡುಗಳ್ಳ ವೀರಪ್ಪನ್ ಕುರಿತಾದ ವೆಬ್ ಸೀರೀಸ್ ಕೂಡ ಮಾಡಿದ್ದರು.
ಈಗ ಅವರ ಮಗಳು ವಿಜೇತ ಅವರು ಚಿತ್ರರಂಗದ ಬಗ್ಗೆ ಒಲವನ್ನು ಹೊಂದಿದ್ದು ಸಿನಿಮಾಗಳಲ್ಲಿ ಅಭಿನಯಿಸಲು ಮನಸ್ಸು ಮಾಡಿದ್ದಾರೆ. ವಿಜೇತ ಅವರು ಮೈಸೂರಿನ ರಂಗಾಯಣದಲ್ಲಿ ‘ಡಿಪ್ಲೊಮಾ ಇನ್ ಥಿಯೇಟರ್ ‘ ಕೋರ್ಸ್ ಮುಗಿಸಿ ಹಿರಿತೆರೆಯಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸನ್ನದ್ದರಾಗಿದ್ದಾರೆ.



