ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕೆ ಬರುತ್ತಾರೆ ಎಂಬ ವದಂತಿಗಳು ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಈ ನಡುವೆ ದೊಡ್ಡದೊಂದು ಸುದ್ದಿ ಹೊರಗೆ ಬಂದಿದೆ. ಈ ಸುದ್ದಿ ಸಿನಿಪ್ರಿಯರಿಗೆ ಹಾಗೂ ಕಿಚ್ಚನ ಅಭಿಮಾನಿಗಳಿಗೆ ಭರ್ಜರಿ ಭೋಜನವಾಗಲಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್’ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಆಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಈಗಾಗಲೇ ಸಿನಿಮಾ ಕಥೆ ಸಿದ್ಧವಾಗಿದ್ದು, ಹಿಂದಿಯಲ್ಲಿ ಮಾತ್ರ ಸಲ್ಮಾನ್ ಖಾನ್ ನಟಿಸಲಿದ್ದು, ದಕ್ಷಿಣ ಭಾರತದ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸುದೀಪ್ ಅವರ ನಟಿಸಲಿದ್ದಾರೆಂದು ತಿಳಿದುಬಂದಿದೆ.
ಹಿಂದಿಯಲ್ಲಿ ಸನ್ಮಾನ್ ಖಾನ್ ನಟಿಸುವಂತೆ ಮಾಡಲು ಯೋಜಿಸಲಾಗಿದೆ. ದಕ್ಷಇಣ ಭಾರತದ ಭಾಷೆಗಳಲ್ಲಿ ನಾನೇ ನಟಿಸುತ್ತಿದ್ದೇನೆ. ಈಗಾಗಲೇ ಚಿತ್ರ ಕುರಿತು ಮಾತುಕತೆ ಆರಂಭಿಸಲಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲೇ ಸಲ್ಮಾನ್ ಖಾನ್ ಅವರ ಜೊತೆಗೆ ಮಾತುಕತೆ ನಡೆಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಭೇಟಿಯಾಗುತ್ತೇನೆಂದು ಸುದೀಪ್ ಹೇಳಿದ್ದಾರೆ.
ಚಿತ್ರದ ಕಥೆಗೆ ಸಲ್ಮಾನ್ ಖಾನ್ ಅವರಂತಹ ನಟರೇ ಬೇಕಿದೆ. ಚಿತ್ರದ ಯಾವುದೇ ಅವಕಾಶವನ್ನಾದರೂ ಸದ್ಭಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಚಿತ್ರದ ಸಂಪೂರ್ಣ ಆಯ್ಕೆ, ನಿರ್ಧಾರ ನನ್ನ ಮೇಲಿದೆ ಚಿತ್ರದ ಕಥೆಗೆ ನ್ಯಾಯ ದೊರಕಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಒಬ್ಬ ನಿರ್ದೇಶಕನಾಗಿ ಚಿತ್ರದ ಕಥೆಗೆ ಪ್ರಾಮುಖ್ಯತೆ ನೀಡುತ್ತೇನೆಂದು ತಿಳಿಸಿದ್ದಾರೆ.
****