ದಸರಾ ಮತ್ತು ಆಯುಧ ಪೂಜೆ ಸಡಗರಕ್ಕೆ ಮತ್ತಷ್ಟು ಮೆರಗು ನೀಡಲು ಸ್ಟಾರ್ ನಟರ ದೊಡ್ಡ ದೊಡ್ಡ ಚಿತ್ರಗಳು ತೆರೆಗೆ ಬರ್ತಿವೆ ಅ 14ಕ್ಕೆ ವಿಜಯ್ ನಿರ್ದೇಶನದ ಸಲಗ ಮತ್ತು ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ರಿಲೀಸ್ ಆಗ್ತಿವೆ, ಮತ್ತು ಇದೇ ತಿಂಗಳು ಭಜರಂಗಿ 2, ಪ್ರೇಮಂ ಪೂಜ್ಯಂ ಚಿತ್ರವೂ ಬಿಡುಗಡೆಗೆ ಫಿಕ್ಸ್ ಆಗಿವೆ. ಈ ಎಲ್ಲಾ ಸ್ಟಾರ್ ನಟರ ಸಿನಿಮಾಗ ಮಧ್ಯೆ ಈಗಾಗಲೇ ತೆರೆ ಕಂಡು ಉತ್ತಮ ಪ್ರದರ್ಶನ ಕಾಣ್ತಿರೂ ನಿನ್ನ ಸನಿಹಕೆ ಚಿತ್ರಕ್ಕೆ ಹೆಚ್ಚು ಎಫೆಕ್ಟ್ ಬೀಳುವ ಸಾಧ್ಯತೆ ಇದೆ ಇದಕ್ಕೆ ಕಾರಣ ಚಿತ್ರಮಂದಿರಗಳ ಸವಾಲು.
ಹೌದು ನಿನ್ನ ಸನಿಹಕೆ ಚಿತ್ರ ತೆರೆ ಕಂಡು ಉತ್ತಮ ಪ್ರದರ್ಶನ ಕಾಣ್ತಿದೆ. ಸಿನಿ ಪ್ರೀಯರಿಂದ, ವಿಮರ್ಶಕರಿಂದ ಭೇಷ್ ಎನ್ನಿಸಿಕೊಂಡಿರುವ ಚಿತ್ರಕ್ಕೆ ಚಿತ್ರಮಂದಿರಗಳ ಸವಾಲು ಎದುರಾಗಿದೆ, ನಿನ್ನ ಸನಿಹಕೆ ಚಿತ್ರಕ್ಕೆ ವಾರಾಂತ್ಯದಲ್ಲಿ ಜನರಿಂದ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿ ಗಳಿಕೆಯಲ್ಲೂ ಭರವಸೆ ಮೂಡಿಸಿದೆ.
ಮೊದಲ ದಿನವೇ ಚಿತ್ರ ತಂಡಕ್ಕೆ ನಿರಾಸೆ ತಂದ ಸಂತೋಷ್ ಥಿಯೇಟರ್
ಅ.8 ಕ್ಕೆ ಚಿತ್ರ ರಿಲೀಸ್ ಆಗಿ ಮುಖ್ಯ ಚಿತ್ರಮಂದಿರವಾದ ಸಂತೋಷ್ ಥಿಯೇಟರ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಸಿನಿಮಾ ಪ್ರದರ್ಶನ ರದ್ದಾಯಿತು ನಂತರ ನವರಂಗ್ ಚಿತ್ರಮಂದಿರಕ್ಕೆ ಶಿಫ್ಟ್ ಮಾಡಬೇಕಾಯಿತು ಇದು ಚಿತ್ರ ತಂಡಕ್ಕೆ ಹೆಚ್ಚು ನಿರಾಸೆಯನ್ನಂಟು ಮಾಡಿತ್ತು.
ಆದರೆ ಈಗ ನಿನ್ನ ಸನಿಹಕೆ ಚಿತ್ರಕ್ಕೆ ಮೈಲೇಜ್ ಸಿಕ್ಕಿದ್ದು ಉತ್ತಮ ಪ್ರದರ್ಶನ ಕಾಣ್ತಿದೆ ಪಾಸಿಟೀವ್ ರಿವ್ಯೂ ಕೂಡ ಸಿಕ್ಕಿದೆ ಎರಡನೇ ವಾರ ಚಿತ್ರದ ಕಲೆಕ್ಷನ್ ಕೂಡ ಭರವಸೆ ತಂದಿದೆ ಹೀಗಿರುವಾಗ ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರ ಬಿಡುಗಡೆ ಆಗುವ ಮಾತ್ರಕ್ಕೆ ಇಂತಹ ಒಳ್ಳೆಯ ಚಿತ್ರಗಳನ್ನು ಎತ್ತಂಗಡಿ ಮಾಡುವುದು ಎಷ್ಟು ಸರಿ ಮತ್ತು ಯಾವಾಗಲೂ ಹೀಗೆ ಮಾಡಿದ್ರೆ ಹೊಸಬರ ಪಾಡೇನು, ಸಿನಿಮಾ ಚೆನ್ನಾಗಿಲ್ಲಾ ಪ್ರೇಕ್ಷಕರು ಥಿಯೇಟರ್ಗೆ ಬರ್ತಿಲ್ಲಾ ಅಂದ್ರೆ ಅದು ಬೇರೆ ಆದ್ರೆ ಜನರಿಂದ ಭೇಷ್ ಎನ್ನಿಸಿಕೊಂಡು ಉತ್ತಮ ಪ್ರದರ್ಶನ ಕಾಣ್ತಿರೋ ಇಂತಹ ಸಿನಿಮಾಗಳನ್ನ ಉಳಿಸಿಕೊಳ್ಳೊ ಜವಬ್ದಾರಿಯೂ ಕೂಡ ಕನ್ನಡ ಚಿತ್ರರಂಗಕ್ಕೆ ಅವಶ್ಯಕವಾಗಿದೆ
****