ಡಾರ್ಲಿಂಗ್ ಕೃಷ್ಣಾ ಮತ್ತು ಭಾವನಾ ಮೆನನ್ ಅಭಿನಯದ, ನಾಗಶೇಖರ್ ನಿರ್ದೇಶನದ ಬಹು ನಿರೀಕ್ಷಿತ Krishna@gmail.com ಸಿನಿಮಾದ ಇನ್ನೊಂದು ಸುಂದರ ಮಧುರ ಹಾಡು ‘ನೀ ಜೀವಕೂ ಮೀರಿದ ಆತ್ಮದ ಸ್ನೇಹಿತ’ ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ.
ಅನುರಾಧ ಭಟ್ ಅವರ ಮಧುರವಾದ ದ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡನ್ನು ಕವಿರಾಜ್ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅಕ್ಟೋಬರ್ 15 ಕ್ಕೆ ಚಿತ್ರ ರಾಜಾದ್ಯಂತ ಸುಮಾರು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್, ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಈಗ ಮತ್ತೊಂದು ಮೆಲೋಡಿ ಸಾಂಗ್ ಬಿಡುಗಡೆಯಾಗಿದ್ದು ಸಿನಿ ಪ್ರಿಯರಿಗೆ ಇಷ್ಟವಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ.