ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಸಲಗ ಚಿತ್ರ ಇದೇ ಅಕ್ಟೋಬರ್ 14 ರಂದು ತೆರೆ ಕಾಣಲಿದೆ. ಚಿತ್ರದ ರಿಲೀಸ್ ಗಾಗಿ ಕಾದಿದ್ದ ಅಭಿಮಾನಿಗಳಲ್ಲಿ ಭಾನುವಾರ (ಅ 10) ನೆನ್ನೆ ನಡೆದ ಪ್ರಿ ರಿಲೀಸ್ ಇವೆಂಟ್ ಮತ್ತಷ್ಟು ಖುಷಿ ನೀಡಿದೆ.
ಸಲಗ ಪ್ರಿ ರಿಲೀಸ್ ಇವೆಂಟ್ ಅಲ್ಲಿ ರಾಜ್ಯದ ಪಾಲಿಟಿಕ್ಸ್ ಲೆಜೆಂಡ್ಸ್ ಎಂದೆ ಹೆಸರಾದ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸ್ಯಾಂಡಲ್ ವುಡ್ ಸ್ಟಾರ್ಸ್ ಗಳಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾಗವಹಿಸಿ ಶುಭ ಕೋರಿದರು.
ಈ ಹಿಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ನಾಯಕಿಯಾಗಿ ನಟಿಸಿದ್ದ ಸಂಜನಾ ಆನಂದ್ ಅಕ್ಟೋಬರ್ 14ರಂದು ಬಿಡುಗಡೆಯಾಗುತ್ತಿರುವ ಸಲಗ ಸಿನಿಮಾ ತಮಗೆ ಫ್ರೆಶ್ ಸ್ಟಾರ್ಟ್ ನೀಡಲಿದೆ ಎನ್ನುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಸಲಗ ಚಿತ್ರದ ನಾಯಕಿ ಸಂಜನಾ ಅವರು ಪುನೀತ್ ರಾಜಕುಮಾರ್ ಅವರ ದೊಡ್ಡ ಫ್ಯಾನ್ ಕೂಡ. ಅವರು ನೆನ್ನೆ ನಡೆದ ಪ್ರಿ ರಿಲೀಸ್ ಇವೆಂಟ್ ಅಲ್ಲಿ ಭಾಗವಹಿಸಿ ವಿಶ್ ಮಾಡಿರುವುದು ಸಂಜನಾಗೆ ಫುಲ್ ಖುಷಿ ನೀಡಿದಿಯಂತೆ. ಅದನ್ನು ಅವರು ವೇದಿಕೆ ಮೇಲು ಹಂಚಿಕೊಂಡರು. ಸಂಜನಾ ಅವರು ಒಟ್ಟು 4 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಲಾಸ್ಟ್ ಸಿನಿಮಾ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಬಿಡುಗಡೆಯಾಗಿ ಎರಡೂವರೆ ವರ್ಷಗಳು ಕಳೆದುಹೋಗಿವೆ. ಇಷ್ಟು ದೀರ್ಘ ಸಮಯದ ನಂತರ ತಮ್ಮ ಸಿನಿಮಾ ಸಲಗ ಬಿಡುಗಡೆಯಾಗುತ್ತಿರುವುದರಿಂದ ಫ್ರೆಶ್ ಸ್ಟಾರ್ಟ್ ಅನ್ನಿಸುತ್ತಿದೆ ಎಂದು ಸಂಜನಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಇಲ್ಲಿದೆ ಅದರ ಎಕ್ಸ್ ಕ್ಲೂಸಿವ್ ವೀಡಿಯೋ
****