ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿ ನಟಿಸಿರುವ ಸಲಗ ಚಿತ್ರ ದಸರಾ ಹಬ್ಬದಂದು ಅಕ್ಟೋಬರ್ 14 ಕ್ಕೆ ಬಿಡುಗಡೆ ಆಗುತ್ತಿದೆ, ಅದರ ಪ್ರಿ ರಿಲೀಸ್ ಇವೆಂಟ್ ಭಾನುವಾರ (ಅ.10) ನಡೆದಿದ್ದು ಈ ಕಾರ್ಯಕ್ರಮದಲ್ಲಿ ಶಿವರಾಜಕುಮಾರ್ ಅತಿಥಿಯಾಗಿ ಭಾಗವಹಿಸಿ ಸಲಗ ಚಿತ್ರಕ್ಕೆ ಶುಭ ಕೋರಿ ಮಾತನಾಡಿದರು.
ದುನಿಯಾ ವಿಜಯ್ ಬಹಳ ಶ್ರಮ ಜೀವಿ ಅವರು ಪಾತ್ರಮಾಡುವಾಗ ಚಿಕ್ಕ ಪಾತ್ರ ಡೊಡ್ಡ ಪಾತ್ರ ಎಂಬ ವ್ಯತ್ಯಾಸ ಮಾಡದೆ ಬಹಳ ಶ್ರದ್ದೆಯಿಂದ ಆ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾರೆ. ಅವರ ನಿರ್ದೇಶನದಲ್ಲಿ ನನಗೂ ಅಭಿನಯಿಸುವ ಆಸೆ ಇದೆ ಎಂದರು, ಒಂದು ವಿಭಿನ್ನ ಪಾತ್ರದಲ್ಲಿ ನಟಿಸುವ ಇರಾದೆ ವ್ಯಕ್ತಪಡಿಸಿದರು.
‘ಆಂಕರ್ ಅನುಶ್ರೀ ಶಿವಣ್ಣನಿಗೆ ಕೇಳ್ತಾರೆ ಶಿವಣ್ಣ, ವಿಜಯ್ ನಿರ್ದೇಶನ ಮಾಡಿದ್ರೆ ಯಾವ ಜಾನರ್ ನಲ್ಲಿ ಮಾಡೋಕೆ ಇಷ್ಟ ಪಡ್ತೀರ ಅಂತ.. ಆಗ ಶಿವಣ್ಣ ‘ಈಗ ಮಾಡುತ್ತಿರುವುದೆಲ್ಲ ಬಿಟ್ಟು ಬೇರೆ ಏನಾದರೂ ಮಾಡಬೇಕು. ಡ್ರೈನೇಜ್ ಕ್ಲೀನ್(ಜಾಡಮಾಲಿ) ಮಾಡುವವರ ಪಾತ್ರವನ್ನೂ ಮಾಡಬೇಕು. ಯಾಕೆಂದರೆ ಈ ಸಮಾಜದಲ್ಲಿ ಕ್ಲೀನ್ ಮಾಡಬೇಕಿರುವುದು ಬಹಳ ಇದೆ’ ಎಂದು ಶಿವಣ್ಣ ಹೇಳಿದರು.
****