ವಿಆರ್ ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಇಂದು ಫಿಲ್ಮ್ ಚೇಂಬರ್ ಗೆ ಭೇಟಿ ನೀಡಿದ್ದರು ಈ ವೇಳೆ ‘ವಿಜಯಾನಂದ’ ಚಿತ್ರ ತಂಡವೂ ಕೂಡ ಅವರ ಜೊತೆ ಭೇಟಿ ನೀಡಿತ್ತು. ಫಿಲ್ಮಿ ಚೇಂಬರ್ ಗೆ ಭೇಟಿ ನೀಡಿದ್ದ ವಿಆರ್ ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಅವರಿಗೆ ಸಾರಾ ಗೋವಿಂದು ಶಾಲು ಹೊದಿಸಿ ಸನ್ಮಾನ ಮಾಡಿದರು. ಈ ಭೇಟಿ ವೇಳೆ ಆನಂದ ಸಂಕೇಶ್ವರ ಅವರು ಡಾ ರಾಜ್ ಕುಮಾರ್ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಫಿಲ್ಮ್ ಚೇಂಬರ್ ನ ಉಪಾಧ್ಯಕ್ಷರಾದ ಉಮೇಶ್ ಬಣಕಾರ್ ಅವರು ಆನಂದ ಸಂಕೇಶ್ವರ ಅವರಿಗೆ ಫಿಲ್ಮ್ ಚೇಂಬರ್ ನ ಸದಸ್ಯರು ಮತ್ತು ಫಿಲ್ಮ ಚೇಂಬರ್ ಹಿನ್ನಲೆಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಆನಂದ ಸಂಕೇಶ್ವರ ಅವರು ‘ವಿಜಯಾನಂದ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಕರ್ನಾಟಕದ ಖ್ಯಾತ ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಜೀವನ ಆಧರಿಸಿ ಸಿನಿಮಾ ಮೂಡಿಬರುತ್ತಿದೆ. ಇದು ಅವರ ಬಯೋಪಿಕ್ ಆಗಿದ್ದು, ‘ವಿಜಯಾನಂದ’ ಎಂದು ಶೀರ್ಷಿಕೆ ಇಡಲಾಗಿದೆ. ಈಗಾಗಲೇ ‘ವಿಜಯಾನಂದ’ ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್ಲುಕ್ ಅನಾವರಣ ಮಾಡಲಾಗಿದೆ. ಈ ಸಿನಿಮಾದ ಮೂಲಕ ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ಅವರು ಸಿನಿಮಾ ನಿರ್ಮಾಣ ಕ್ಷೇತ್ರಕ್ಕೂ ಕಾಲಿರಿಸಿದ್ದಾರೆ. ‘ವಿಆರ್ಎಲ್ ಫಿಲ್ಮ್ ಪ್ರೊಡಕ್ಷನ್ಸ್’ ಎಂಬ ಸಂಸ್ಥೆ ಮೂಲಕ ಅವರು ನಿರ್ಮಾಪಕರಾಗುತ್ತಿದ್ದಾರೆ.