ಸ್ಯಾಂಡಲ್ ವುಡ್ ನ ಹಿರಿಯ ನಟ ಸತ್ಯಜಿತ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರು ಉಳಿಯುವ ಸಾಧ್ಯತೆ ಕಡೆಮೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇತ್ತೀಚೆಗೆ ಹಾರ್ಟ್ ಸ್ಟ್ರೋಕ್ ಆಗಿ ಸತ್ಯಜಿತ್ ಆರೋಗ್ಯ ಗಂಭೀರ ಆಗಿತ್ತು. ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದ ಕಾರಣ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಗ್ಯಾಂಗ್ರಿನ್ ನಿಂದ ಅವರು ಒಂದು ಕಾಲನ್ನು ಕೂಡ ಕಳೆದುಕೊಂಡಿದ್ದರು.
ಹಲವು ದಿನಗಳಿಂದ ಸತ್ಯಜಿತ್ಗೆ ಆರೋಗ್ಯ ಕೈಕೊಟ್ಟಿದ್ದರಿಂದ ಅವರಿಗೆ ಆರ್ಥಿಕ ಸಂಕಷ್ಟ ಕೂಡ ಎದುರಾಗಿದೆ. ಇತ್ತೀಚೆಗೆ ತಮ್ಮ ಮಗಳು ಸತ್ಯಜಿತ್ ಅವರ ಮೇಲೆ ಮಾಡಿದ್ದ ಆಪಾಧನೆಯಿಂದ ಅವರು ಕುಗ್ಗಿಹೋಗಿದ್ದರು ಈ ಕಾರಣದಿಂದಲೂ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು. ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ಅವರು ಬಹು ಬೇಡಿಕೆಯ ಫೋಷಕ ನಟನಾಗಿದ್ದರು. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಗಮನ ಸೆಳೆಯುತ್ತಿದ್ದ ಸತ್ಯಜಿತ್ ಅವರಿಗೆ ಗ್ಯಾಂಗ್ರಿನ್ ಕಾಣಿಸಿಕೊಂಡ ಬಳಿಕ ಬೇಡಿಕೆ ಕಡಿಮೆ ಆಯಿತು. 2018ರಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ನಟನೆ ‘ಸೆಕೆಂಡ್ ಹಾಫ್’ ಚಿತ್ರದ ಬಳಿಕ ಬೇರೆ ಯಾವುದೇ ಸಿನಿಮಾದಲ್ಲಿ ಸತ್ಯಜಿತ್ ಕಾಣಿಸಿಕೊಂಡಿಲ್ಲ.
****