ಸಲಗ ಚಿತ್ರದ ಬಿಡುಗಡೆಯ ದಿನ ಹತ್ತಿರವಾಗುತಿದ್ದಂತೆ ಹವಾ ಮತ್ತಷ್ಟು ಜೋರಾಗಿ ನಡೀತಿದೆ, ದುನಿಯಾ ವಿಜಯ್ ಅಭಿಮಾನಿಗಳು ಟ್ಯಾಟೊ ಹಾಕಿಸಿಕೊಳದ್ಳುವುದರಿಂದ ಹಿಡಿದು ಆಟೋಗಳ ಮೇಲೆ ಸಲಗ ಪೇಂಟಿಗ್ ಮಾಡಿಸುವುದರ ತನಕ ಅಭಿಮಾನಿಗಳು ತಮ್ಮ ಕ್ರೇಜ್ ತೋರಿಸುತ್ತಿದ್ದಾರೆ. ಇದಕ್ಕೆ ಮತ್ತೊಂದು ಕ್ರೇಜ್ ಅಡಿಶನ್ ಮಾಡೋದಾದ್ರೆ ಇಂದು ಸ್ಯಾಂಡಲ್ ವುಡ್ ಡಾಲಿ ಧನಂಜಯ್ ಅವರು ಪ್ರಯಾಣಿಸುವಾಗ ಕುಣಿಗಲ್ ಮಾರ್ಗ ದಲ್ಲಿ ಅವರನ್ನು ಮುತ್ತಿಕೊಂಡ ಅಭಿಮಾನಿಗಳು ಅಭಿಮಾನದ ಹೊಳೆಯನ್ನೆ ಹರಿಸಿದ್ದಾರೆ.
ಡಾಲಿ ಧನಂಜಯ್ ರನ್ನು ನೋಡಲು ಅವರೊಂದಿಗೆ ಫೋಟೊ ಕ್ಲಿಕ್ಕಿಸಲು ದೊಡ್ಡ ಜನ ಜಾತ್ರೆಯೇ ಸೇರಿದೆ, ಅಭಿಮಾನಿಗಳು ಡಾಲಿ ಧನಂಜಯ್ ಅವರಿಗೆ ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಈ ಕ್ರೇಜ್ ನೋಡಿದರೆ ಸಲಗ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಅಲ್ಲಿ ಧೂಳ್ ಎಬ್ಬಿಸಿ ಹೊಸ ದಾಖಲೆ ಸೃಷ್ಟಿಸೋ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ. ಅಭಿಮಾನಿಗಳ ಕ್ರೇಜ್ ನೋಡಿದ್ರೆ ಸಲಗ ಚಿತ್ರದಲ್ಲಿ ಡಾಲಿ ಧನಂಜಯ್ ಅವರ ಸಾಮ್ರಾಟ್ ಪಾತ್ರವೂ ಕೂಡ ಚಿತ್ರಕ್ಕೆ ಫುಲ್ ಮೈಲೇಜ್ ನೀಡಲಿದ್ದು, ಧನಂಜಯ್ ಗೂ ಇದೊಂದು ದೊಡ್ಡ ಬ್ರೇಕ್ ನೀಡಬಹುದಾ ಗೊತ್ತಿಲ್ಲಾ..? ಯಾಕೆಂದರೆ ನಿರ್ದೇಶಕ ವಿಜಯ್ ಅವರು ಇಲ್ಲಿಯ ತನಕ ಯಾವ ಗುಟ್ಟನ್ನು ಬಿಟ್ಟು ಕೊಡದೆ ಅಭಿಮಾನಿಗಳಲ್ಲಿ ಕುತೂಹಲವನ್ನು ಹಾಗೆಯೇ ಉಳಿಸಿದ್ದಾರೆ. ಎಲ್ಲಾ ಪ್ರಶ್ನೆಗೂ ಉತ್ತರ ಸಿಗಬೇಕೆಂದರೆ ಅಕ್ಟೋಬರ್ 14 ರ ವರೆಗೆ ಕಾಯಲೇಬೇಕು.
****