ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸಂಭ್ರಮ ಮನೆ ಮಾಡಿದೆ ಕೊರೊನಾ ಸಂಕಷ್ಟದಿಂದ ಅತಂತ್ರವಾಗಿದ್ದ ಕನ್ನಡ ಚಿತ್ರರಂಗ ಮತ್ತೆ ತನ್ನ ವೈಭವವನ್ನ ಮರಳಿ ಪಡೆಯುವ ಉತ್ಸಾಹದಲ್ಲಿದೆ. ಈಗ ಸರ್ಕಾರ ಥಿಯೇಟರ್ ಸಂಪೂರ್ಣ ಭರ್ತಿಗೆ ಅವಕಾಶ ನೀಡಿರುವುದರಿಂದ ಸ್ಯಾಂಡಲ್ ವುಡ್ ನ ಸಾಲು ಸಾಲು ಸಿನಿಮಾಗಳು ಬೆಳಿ ತೆರೆಗೆ ಬರಲು ಸಾಲುಗಟ್ಟಿ ನಿಂತಿವೆ.
ಸೂರಜ್ ಗೌಡ ನಾಯಕನಾಗಿ ಡಾ ರಾಜ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಾಯಕಿಯಾಗಿ ಅಭಿನಯಿಸಿರುವ ನಿನ್ನ ಸನಿಹಕೆ ಸಿನಿಮಾ ಇಂದು ರಾಜಾದ್ಯಂತ 200 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗ್ತಿದೆ.
ನಿನ್ನ ಸನಿಹಕೆ ಚಿತ್ರದ ಹಾಡುಗಳು ಈಗಾಲೆ ಸೂಪರ್ ಹಿಟ್ ಆಗಿದ್ದು, ಚಿತ್ರವೂ ಕೂಡ ಸಿನಿ ಪ್ರೇಮಿಗಳಿಗೆ ಇಷ್ಟವಾಗವ ಎಲ್ಲಾ ಲಕ್ಷಣಗಳು ಇವೆ ಎಂದು ಚಿತ್ರತಂಡದ ನಂಬಿಕೆ. ಇದೆಲ್ಲದರ ಜೊತೆ ಡಾ ರಾಜ್ ಕುಮಾರ್ ಕಟುಂಬ ಸಿನಿಮಾದ ಬೆನ್ನಿಗೆ ನಿಂತಿರುವುದು ಸಿನಿಮಾ ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಇನ್ನು ಪ್ರೇಕ್ಷಕ ಪ್ರಭು ಈ ಪ್ರತಿಭೆಗಳನ್ನ ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ.
****