ಓಟಿಟಿ ಫ್ಲಾಟ್ ಫಾಮ್ನಲ್ಲಿ ಕನ್ನಡ ಸಿನಿಮಾಗಳು ನಿಲ್ಲಬೇಕು.. ಗೆಲ್ಲಬೇಕು ಅನ್ನೋದು ಕೋಟ್ಯಾಂತರ ಚಿತ್ರರಸಿಕರ ಆಸೆ. ಆದ್ರೆ ಓಟಿಟಿಯಲ್ಲಿ ಇಲ್ಲಿ ತನಕ ಬಂದಿರೋ ಯಾವ ಸಿನಿಮಾಗಳೂ, ಆಸೆಯನ್ನು ಪೂರೈಸಲು ಸಾಧ್ಯವಾಗಿಲ್ಲ.. ಆದ್ರೀಗ ನಟ ರಾಕ್ಷಸ ಧನಂಜಯ್ ಸಿನಿಮಾ ಆ ಸರಪಳಿಯನ್ನು ಬ್ರೇಕ್ ಮಾಡಿದೆ..
ಧನಂಜಯ್ ನಟನೆಯ ‘ರತ್ನನ್ ಪ್ರಪಂಚ’ ಟ್ರೈಲರ್ ಜನಮನ ಗೆದ್ದಿತ್ತು. ಈ ಸದಭಿರುಚಿಯ ಸಿನಿಮಾವನ್ನು ದೊಡ್ಡ ಪರದೆ ಮೇಲೆ ನೋಡ್ಬೇಕು ಅನ್ನೋದು ಕನ್ನಡಿಗರ ಕನಸಾಗಿತ್ತು.. ಆದ್ರೆ KRG ಸ್ಟುಡಿಯೋಸ್ ಸಿನಿಮಾನಾ ಓಟಿಟಿಗೆ ಬಿಡೋ ಧೈರ್ಯ ಮಾಡಿದ್ರು. ಆ ಲೆಕ್ಕಾಚಾರದಲ್ಲಿ ಹೇಳೋದಾದ್ರೆ ಇದು ಓಟಿಟಿಯಲ್ಲಿ ಬರ್ತಿರೋ ಮೊದಲ ಸ್ಟಾರ್ ಸಿನಿಮಾ..
ಇದಕ್ಕಿಂತಲೂ ಖುಷಿಯ ವಿಚಾರ ಏನಂದ್ರೆ, ಅಮೇಜಾನ್ ಸುಮಾರು ₹7 ಕೋಟಿಗೆ ‘ರತ್ನನ್ ಪ್ರಪಂಚ’ ಖರೀದಿಸಿದೆ.. ಜೊತೆಗೆ ಓಟಿಟಿ ರೈಟ್ಸ್, ಆಡಿಯೋ ರೈಟ್ಸ್, ಡಬ್ಬಿಂಗ್ ರೈಟ್ಸ್ ಎಲ್ಲವೂ ಸೇರಿ ಬರೋಬ್ಬರಿ ₹12 ಕೋಟಿ ಬ್ಯುಸಿನೆಸ್ ಮಾಡಿದೆ ‘ರತ್ನನ್ ಪ್ರಪಂಚ”.
ಈ ಖುಷಿ ವಿಚಾರದ ಜೊತೆಗೆ ರತ್ನನ್ ಪ್ರಪಂಚ ಇದೇ ತಿಂಗಳ 22ನೇ ತಾರೀಖು ಅಮೇಜಾನ್ ಪ್ರೈಂ ಓಟಿಟಿಯಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ದೊಡ್ಡ ನಿರೀಕ್ಷೆ ಹುಟ್ಟಿಸಿರೋ ರತ್ನನ್ ಪ್ರಪಂಚ ಓಟಿಟಿ ಇತಿಹಾಸದಲ್ಲಿ ಕನ್ನಡದ ಮಟ್ಟಿಗೆ ಹೊಸ ದಾಖಲೆ ಸೃಷ್ಟಿಸೋ ಸೂಚನೆ ಕೊಡ್ತಿದೆ.
ಅಂದಹಾಗೆ ರತ್ನನ್ ಪ್ರಪಂಚ ಚಿತ್ರವನ್ನ ರೋಹಿತ್ ಪದಕಿ ನಿರ್ದೇಶಿಸಿದ್ದು, ಕೆ.ಆರ್.ಜಿ ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಡಾಲಿ ಧನಂಜಯ ನಾಯಕನಾಗಿ ಕಾಣಿಸಿಕೊಂಡಿರೋ ಈ ಚಿತ್ರದಲ್ಲಿ,ರೆಬಾ ,ಪಂಜು, ಉಮಾಶ್ರೀ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
****