‘ಮಮ್ಮಿ’ ಖ್ಯಾತಿಯ ಲೋಹಿತ್ ಆಕ್ಷನ್ ಕಟ್ ಹೇಳುತ್ತಿರುವ, ‘ಮಾಫಿಯಾ’ ಆಕ್ಷನ್ ಕಂ ಎಂಟರ್ಟೈನರ್ ಚಿತ್ರದಲ್ಲಿ, ಪ್ರಜ್ವಲ್ ದೇವರಾಜ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಮಾಫಿಯಾ ಚಿತ್ರವನ್ನು ಗುರುದತ್ ಗಾಣಿಗಾ ನಿರ್ದೇಶನ ಮಾಡುತಿದ್ದಾರೆ ಎಂಬ ಮಾಹಿತಿ ಇತ್ತು ಆದರೆ ಕಾರಣಾಂತರದಿಂದ ಈ ಸಿನಿಮಾವನ್ನು ಅವರು ನಿರ್ದೇಶನ ಮಾಡುತ್ತಿಲ್ಲಾ ಹಾಗಾಗಿ ಲೋಹಿತ್ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ‘ಮಮ್ಮಿ’ ಸಿನಿಮಾ ಮಾಡಿ, ಮೊದಲ ಪ್ರಯತ್ನದಲ್ಲಿ ಎಲ್ಲರ ಗಮನಸೆಳೆದ ನಿರ್ದೇಶಕ ಲೋಹಿತ್. ಆನಂತರ ಅವರು ಮತ್ತೊಮ್ಮೆ ಪ್ರಿಯಾಂಕಾ ಅವರೊಂದಿಗೆ ‘ದೇವಕಿ’ ಮಾಡಿದ್ದರು. ಸದ್ಯ ನಿರ್ಮಾಣ ಮತ್ತು ನಿರ್ದೇಶನ ಅಂತ ಸಾಕಷ್ಟು ಬ್ಯುಸಿ ಆಗಿದ್ದಾರೆ. ಅಲ್ಲದೆ, ಶಿವರಾಜ್‌ಕುಮಾರ್ ಅವರೊಂದಿಗೆ ‘ಸತ್ಯಮಂಗಳ’ ಅನ್ನೋ ಸಿನಿಮಾವನ್ನೂ ಸಹ ಲೋಹಿತ್ ಮಾಡಬೇಕಿದೆ. ಆ ಸಿನಿಮಾ ಶುರುವಾಗುವುದು ಮುಂದಿನ ವರ್ಷದ ಆರಂಭದಲ್ಲಿ. ಹಾಗಾಗಿ, ಈಗ ಪ್ರಜ್ವಲ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.
ಈ ಪ್ರಾಜೆಕ್ಟ್ ಕ್ಯಾಪ್ಟನ್ ಆಗಿ ಲೋಹಿತ್ ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ, ಅವರಿಗೆ ನನ್ನ ಮತ್ತು ಪ್ರಜ್ವಲ್ ಅವರ ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹವಿದೆ ಎಂದು ನಿರ್ಮಾಪಕರು ಹೇಳುತ್ತಾರೆ.
ಪ್ರಜ್ವಲ್ ಅವರಿಗೆ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನವೆಂಬರ್ 1ರಿಂದ ಬೆಂಗಳೂರು, ಮೈಸೂರು ಮತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದು ಮಾಹಿತಿ ನೀಡುತ್ತಾರೆ ಲೋಹಿತ್. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ‘ಟಗರು’ ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಜೆಬಿನ್ ಜಾಕಬ್ ಈ ಚಿತ್ರದ ಛಾಯಾಗ್ರಹಕರಾಗಿದ್ದಾರೆ.
****