ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನು ನಾಯಕನಾಗಿ ನಟಿಸಿರುವ ‘ಮುಗಿಲ್ ಪೇಟೆ’ ಚಿತ್ರದ ವಿಡಿಯೊ ಸಾಂಗ್ ದಸರಾದ ಮೊದಲ ದಿನವಾದ ಇಂದು(ಅ 7) ಬಿಡುಗಡೆಯಾಗಿದೆ.
ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ವೀಕ್ಷಣೆ ಮಾಡಿದ್ದಾರೆ. ನಿರ್ದೇಶಕ ಭರತ್ ಎಸ್. ನಾವುಂದ ಅವರು ಬರೆದಿರುವ ಈ ಹಾಡಿನಲ್ಲಿ ಮನು ಹಾಗೂ ಕಯಾದು ಲೋಹರ್ ನಟಿಸಿದ್ದಾರೆ. ಶ್ರೀಧರ್ ಸಂಭ್ರಮ್ ಅವರ ಸಂಗೀತ ಇರುವ ಈ ಹಾಡಿಗೆ ನಕುಲ್ ಧ್ವನಿಯಾಗಿದ್ದಾರೆ. ಮೆಲೋಡಿಯಸ್ ಆಗಿರುವ ಈ ಹಾಡು ನಾಡಹಬ್ಬದ ಸಂಭ್ರಮಕ್ಕಾಗಿ ಚಿತ್ರಪ್ರೇಮಿಗಳಿಗೆ ಚಿತ್ರತಂಡ ಉಡುಗೊರೆ ನೀಡಿದೆ.
ಮಗನ ಮೊದಲ ಸಿನಿಮಾದ ಕುರಿತು ಕೂ ಮಾಡಿರುವ ಕ್ರೆಜಿಸ್ಟಾರ್ ರವಿಚಂದ್ರನ್, ಮೆಲೋಡಿ ಆಫ್ ದಿ ಇಯರ್ ಎಂದು ವಿಡಿಯೊ ಸಾಂಗ್ ಅನ್ನು ಹಂಚಿಕೊಂಡಿದ್ದಾರೆ.ಮನು ಅವರಿಗೆ ನಾಯಕಿಯಾಗಿ ಕಯಾದು ಲೋಹರ್ ನಟಿಸಿದ್ದಾರೆ. ರಿಷಿ, ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು ಹೀಗೆ ಹೆಸರಾಂತ ಕಲಾವಿದರು ‘ಮುಗಿಲ್ ಪೇಟೆ’ಯಲ್ಲಿ ಅಭಿನಯಿಸಿದ್ದಾರೆ.
ರವಿವರ್ಮ (ಗಂಗು) ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಡಾ.ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಹರ್ಷ, ಮುರಳಿ, ಮೋಹನ್ ನೃತ್ಯ ನಿರ್ದೇಶನ, ಹಾಗೂ ಸತೀಶ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರವನ್ನು ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿದ್ದಾರೆ.