ಗಾಂಧಿ ನಗರದ ಪಡಸಾಲೆಯಲ್ಲಿ ಇತ್ತೀಚೆಗೆ ಗುಸು ಗುಸು ಶುರುವಾಗಿತ್ತು ಅದೇನಪ್ಪಾ ಅಂದ್ರೆ, ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಸೂರಿ ಮತ್ತೆ ಸಿನಿಮಾ ಮಾಡುತ್ತಾರೆ ಎಂಬ ವಿಷಯ, ಆದರೆ ಇತ್ತೀಚಿನ ಮಾಹಿತಿಗಳ ಪ್ರಕಾರ, ದುನಿಯಾ ನಿರ್ದೇಶಕ ಸೂರಿ ಮತ್ತು ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಹೊಸ ಸಿನಿಮಾಗಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ, ಸ್ಯಾಂಟಲ್ ವುಡ್ ನಲ್ಲಿ ಸೂರಿ ಮತ್ತು ಶಿವರಾಜ್ ಕುಮಾರ್ ಅವರ ಟಗರು ಸಿನಿಮಾ ಫುಲ್ ಕಮಾಲ್ ಮಾಡಿತ್ತು. ಮತ್ತೆ ಇಬ್ಬರ ಕಾಂಬಿನೇಶನ್ ನಲ್ಲಿ ಚಿತ್ರ ರೆಡಿಯಾಗ್ತಿರುವ ಸುದ್ದಿ ಅಭಿಮಾನಿಗಳಿಗೆ ಫುಲ್ ಖುಷಿ ತಂದಿದೆ.
ಸದ್ಯ ಸೂರಿ ಬ್ಯಾಡ್ ಮ್ಯಾನರ್ಸ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ, ಶೀಘ್ರವೇ ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಸೂರಿಯೊಂದಿಗೆ ಮಾಡಿದ ಕಡ್ಡಿಪುಡಿ ಮತ್ತು ಟಗರು ಸಿನಿಮಾ ಬೆಳ್ಳಿತೆರೆ ಮೇಲೆ ಮ್ಯಾಜಿಕ್ ಮಾಡಿದ್ದವು ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಸೂರಿ ಯಾವಾಗಲೂ ನನಗಾಗಿ ವಿಭಿನ್ನವಾದ ಕತೆ ತಯಾರು ಮಾಡುತ್ತಿರುತ್ತಾರೆ ಎಂಬ ನಂಬಿಕೆ ನನಗಿದೆ, ನನ್ನ ಮುಂದಿನ ಪ್ರಾಜೆಕ್ಟ್ ಉತ್ತಮವಾಗಿರುತ್ತದೆ ಮತ್ತು ದೊಡ್ಡದಾಗಿರುತ್ತದೆ, ಈ ಸಿನಿಮಾ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ.
****