ಕರ್ನಾಟಕದ ಜನತೆಗೆ ದಸರಾ ಎಂದರೆ ಅದೊಂದು ಹಬ್ಬ, ಸಂಭ್ರಮ ಈ ಬಾರಿಯ ದಸರಾ ಇನ್ನು ವಿಶೇಷ ಯಾಕೆಂದರೆ ಅಕ್ಟೋಬರ್ 14 ರಂದು ರಾಜ್ಯದ ಬಹುತೇಕ ಥಿಯೇಟರ್ಗಳಲ್ಲಿ ಸಲಗನ ಮೆರವಣಿಗೆ ನಡೆಯಲಿದೆ. ಕಳೆದ 2 ವರ್ಷದಿಂದ ಮಂಕಾಗಿರುವ ಚಿತ್ರರಂಗಕ್ಕೆ ಸಲಗನ ಆಗಮನ ದೊಡ್ಡ ಪವರ್ ತಂದು ಕೊಡಬಹುದು ಎನ್ನುವ ನಿರೀಕ್ಷೆ ಇದೆ. ಯಾಕೆಂದರೆ ಸಲಗದಲ್ಲಿ ಅಂತಹದೊಂದು ಶಕ್ತಿ ಇದೆ ಅದೇನೆಂದರೆ ಅಲ್ಲಿಯ ಪಾತ್ರಗಳನ್ನು ನಿರ್ವಹಿಸಿರುವ ಕಲಾವಿದರ ದಂಡು.
ಸಲಗ ಚಿತ್ರದ ಬಳಗವೇ ದೊಡ್ಡದು. ಕೆ.ಪಿ.ಶ್ರೀಕಾಂತ್ ನಿರ್ಮಾಪಕರಾದರೆ, ದುನಿಯಾ ವಿಜಯ್, ಡಾಲಿ ಧನಂಜಯ್, ಸಂಜನಾ ಆನಂದ್, ರಂಗಾಯಣ ರಘು, ಅಚ್ಯುತ್ ಕುಮಾರ್, ಚರಣ್ ರಾಜ್ ಮ್ಯೂಸಿಕ್ಕು.. ಹೀಗೆ ದೊಡ್ಡ ದೊಡ್ಡವರ ಶಕ್ತಿಯೇ ಸೇರಿದೆ. ಚಿತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರ ಆಶೀರ್ವಾದವೂ ಸಿಕ್ಕಿದೆ. ಶಿವಣ್ಣ ಫ್ಯಾಮಿಲಿಯ ಸದಸ್ಯರಂತೆಯೇ ಇರುವ ಕೆ.ಪಿ.ಶ್ರೀಕಾಂತ್ ಅವರ ಸಲಗ ಚಿತ್ರವನ್ನು ಅರ್ಪಿಸುತ್ತಿರುವುದು ಗೀತಾ ಶಿವರಾಜ್‍ಕುಮಾರ್. ಇದೆಲ್ಲದರ ಜೊತೆಗೆ ಪವರ್ ಸ್ಟಾರ್ ಪುನೀತ್ ಪವರ್ ಕೂಡಾ ಸಲಗ ಚಿತ್ರಕ್ಕೆ ಸಿಕ್ಕಿದೆ.
ಅಕ್ಟೋಬರ್ 14 ಕ್ಕೂ ಮೊದಲು ಸಲಗ ಟೀಂ ಅಕ್ಟೋಬರ್ 10 ರಂದು ಸಲಗ ಚಿತ್ರದ ಪ್ರೀ-ಈವೆಂಟ್ ಶೋ ಇಟ್ಟುಕೊಂಡಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯದ ವಿರೋದ ಪಕ್ಷದ ನಾಯಕರಾದ ಮಾನ್ಯ ಸಿದ್ದರಾಮಯ್ಯ ಕೂಡ ಭಾಗವಹಿಸುತ್ತಿದ್ದಾರೆ, ಆ ದಿನ ಸಲಗ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಅದನ್ನು ರಿಲೀಸ್ ಮಾಡೋದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಹಾಗಾಗಿ ವಿಜಯ್ ಅವರ ಸಲಗನ ಆರ್ಭಟಕ್ಕೆ ಮತ್ತಷ್ಟು ಪವರ್ ಬರವ ಎಲ್ಲಾ ಲಕ್ಷಣಗಳು ಗೋಚರುಸ್ತಾ ಇವೆ.
****