ಖಡಕ್ ಪೊಲೀಸ್ ಅಧಿಕಾರಿಯಾಗಿ ಇಂದಿಗೂ ಜನಮಾನಸದಲ್ಲಿ ಹೆಸರಾಗಿ ಉಳಿದಿರುವ ಮೊದಲಿಗರು ಅಂದ್ರೆ ಅದು ನಿವೃತ್ತ ಪೊಲೀಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನ. ಇವರ ಕುರಿತು ಸಿನಿಮಾಗಳು ಬಂದಿರೋದು ಮಾತ್ರವಲ್ಲ, ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಾಂಗ್ಲಿಯಾನ ಕಾಣಿಸಿಕೊಂಡಿದ್ದರು. ಈಗ ಮತ್ತೊಂದು ಕನ್ನಡ ಸಿನಿಮಾದ ಮೂಲಕ ಅವರು ತೆರೆ ಮೇಲೆ ಬರಲಿದ್ದಾರೆ.
ಈಗಂತೂ ಕನ್ನಡ ಚಿತ್ರರಂಗದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಅಂಡ್ ಹಾರರ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅವುಗಳ ಸಾಲಿಗೆ ಮತ್ತೊಂದು ಸಿನಿಮಾ ‘ಶಿವನಪಾದ’ ಸೆಟ್ಟೇರುತ್ತಿದೆ. ಈ ಚಿತ್ರದಲ್ಲಿ ಸಾಂಗ್ಲಿಯಾನ ಅವರು ಪೊಲೀಸ್ ಅಧಿಕಾರಿಯಾಗಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಶಿವನಪಾದ ಎಂಬುದು ಚಿತ್ರದ ಹೆಸರಾಗಿದೆ ಆದರೆ ಅದು ಉತ್ತರ ಕರ್ನಾಟಕದಲ್ಲಿರುವ ಪ್ರಸಿದ್ಧ ಪ್ರವಾಸಿ ಸ್ಥಳ. ಹಾಗಾಗಿ ಆ ಲೋಕೇಷನ್ ನಲ್ಲಿಯೂ ಶೂಟಿಂಗ್ ನಡೆಯಲಿದೆ ಎಂದಿದ್ದಾರೆ ಕನ್ನಡ ಹಾಗೂ ತಮಿಳಿನ ಚಿತ್ರಗಳಿಗೆ ಈಗಾಗಲೇ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಮಾ.ಚಂದ್ರು.
ಶಿವನಪಾದ ಆರು ಪಾತ್ರಗಳ ಸುತ್ತ ನಡೆಯುವ ಕುತೂಹಲಕರ ಕಥೆಯಾಗಿದ್ದು ಒಂದು ಕೊಲೆಯನ್ನು ಪ್ರಮುಖ ವಸ್ತುವಾಗಿಸಿಕೊಂಡು ಚಿತ್ರದ ಕಥೆ ಸಾಗಲಿದೆ. ಚಿತ್ರದಲ್ಲಿ ವರ್ಷಿತಾ ಗಿರೀಶ್, ಆನಂದ್, ನಾಗೇಶ್ ಆರ್, ಸೂರಿ, ನರಸಿಂಹಮೂರ್ತಿ, ಶೇಷಗಿರಿ, ಆಟೋ ನಾಗರಾಜ್ ಇತರರ ತಾರಾಗಣ ಚಿತ್ರದಲ್ಲಿದೆ.
ಶಿವನಪಾದಕ್ಕೆ ವೀನಸ್ ಮೂರ್ತಿ ಛಾಯಾಗ್ರಹಣ ಮಾಡಿದ್ದು, ವೀರ ಸಮರ್ಥ ಅವರ ಸಂಗೀತ ಸಂಯೋಜನೆ, ವಿಜಯ್ ಭರಮಸಾಗರ ಅವರ ಸಾಹಿತ್ಯ, ವೆಂಕಿ ಯುವಿಡಿ ಅವರ ಸಂಕಲನದ ಜೊತೆಗೆ ಈ ಸಿನಿಮಾಗೆ ಕಥೆ, ಚಿತ್ರಕಥೆ ಸಂಭಾಷಣೆ ನಿರ್ದೇಶನ ಮಾ. ಚಂದ್ರು ಅವರದ್ದು.
****