ಅಕ್ಟೋಬರ್ 14ರಂದು ಬಿಡುಗಡೆಗೆ ಸಿದ್ಧವಾಗಿರುವ ದುನಿಯಾ ವಿಜಯ್ ನಿರ್ದೇಶನದ ಮೊಟ್ಟಮೊದಲ ಸಿನಿಮಾ ‘ಸಲಗ’ ಅಭಿಮಾನಿಗಳಲ್ಲಿ ಕಾತರವನ್ನ ಹೆಚ್ಚಿಸಿರುವುದು ಸುಳ್ಳಲ್ಲ. ಬಿಡುಗಡೆಗಾಗಿಯೇ ವರ್ಷಕ್ಕೂ ಅಧಿಕ ಸಮಯದಿಂದ ಕಾದಿದ್ದ ಸಲಗ ತನ್ನ ಒಡಲಲ್ಲಿ ಪ್ರತಿಭೆಗಳ ಸೈನ್ಯವನ್ನೇ ತುಂಬಿಕೊಂಡಿದೆ.
ಹೌದು, ಸಿದ್ದಿ ಜನಾಂಗದ ಪ್ರತಿಭೆಗಳನ್ನ ಗುರುತಿಸಿ ವೇದಿಕೆ ನೀಡಿದ ದುನಿಯಾ ವಿಜಯ್ ಹೊಸತನವನ್ನು ಹುಡುಕುವ, ಪ್ರಾಮಾಣಿಕವಾಗಿ ಪಾತ್ರಕ್ಕಾಗಿ ಶ್ರಮಿಸುವ, ಜೀವಿಸುವ ತಾರಾಗಣವನ್ನು ಸಹ ‘ಸಲಗ’ದೊಡಲಲ್ಲಿ ಹೊಂದಿದ್ದಾರೆ. ಮಾತ್ರವಲ್ಲ ಪ್ರತಿ ಪಾತ್ರಕ್ಕೂ ಅಷ್ಟೇ ಮಹತ್ವ ಕಲ್ಪಿಸಿದ್ದಾರೆ. ಹಾಗಾದರೆ ಯಾವ ಯಾವ ಪ್ರಮುಖ ಪಾತ್ರದಲ್ಲಿ ಯಾರೆಲ್ಲ ಇದ್ದಾರೆ ನೋಡೋಣ.
ಅಚ್ಯುತ್ ಕುಮಾರ್: ಈಗಂತೂ ಅಚ್ಯುತ್ ಕುಮಾರ್ ಅವರ ಡೆಟ್ಸ್ ಸಿಗೋದು ಸ್ಟಾರ್ ನಟರ ಡೇಟ್ ಸಿಗುವಷ್ಟೇ ಕಷ್ಟಸಾಧ್ಯ ಎನ್ನುವಂತಿದೆ ಅವರ ಶೆಡ್ಯೂಲ್. ಪ್ರತಿ ಚಿತ್ರದ ಪಾತ್ರವು ನೈಜವಾಗಿ ಮೂಡಿಬರುವ ನಟಿಸುವಲ್ಲಿ ಹೆಸರಾಗಿರುವ ಅಚ್ಯುತ್ ಅವರು ಸಲಗದಲ್ಲಿ ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಕ್ರೋಚ್ ಈಗ ಸಲಗದ ಸಾವಿತ್ರಿ: ಟಗರು ಸಿನಿಮಾದ ಪಾತ್ರದಿಂದ ಕಾಕ್ರೋಚ್ ಎಂದೇ ಹೆಸರುವಾಸಿಯಾಗಿರುವ ಸುಧಿ ಈಗ ಸಲಗದಲ್ಲಿ ಸಾವಿತ್ರಿ ಎಂಬ ಪಾತ್ರಧಾರಿಯಾಗಿದ್ದಾರೆ. ಇಲ್ಲಿಯೂ ಒಬ್ಬ ರೌಡಿ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಸುಧಿ ನಟನೆ ಹಾಗೂ ಡಿಪರೇಂಟ್ ಸ್ಟೈಲ್ ನ ಡೈಲಾಗ್ ಡೆಲಿವರಿಯನ್ನ ಸಖತ್ ಎಂಜಾಯ್ ಮಾಡಿದ್ದಾರಂತೆ.
ಶೆಟ್ಟಿಯಾಗಿ ಯಶ್, ಪೊಲೀಸ್ ಅಧಿಕಾರಿಯಾಗಿ ಕನ್ನಡಿಗ ಭಾಸ್ಕರ್: ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟರಲ್ಲಿ ಯಶ್ ಶೆಟ್ಟಿ ಕೂಡ ಒಬ್ಬರು. ಇವರು ಸಲಗ ಚಿತ್ರದಲ್ಲಿ ‘ಶೆಟ್ಟಿ’ ಎಂಬ ಪ್ರಮುಖ ಖಳನಾಯಕನಾಗಿ ನಟಿಸಿದ್ದು, ಸಲಗ ಚಿತ್ರದಲ್ಲಿ ಎರಡು ಶೆಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಾಲು-ಸಾಲು ಖಳನಾಯಕರಿರುವಂತೆ ಪೋಲಿಸರ ಸಂಖ್ಯೆಯೂ ಹೆಚ್ಚೆ ಇದೆ. ಡಾಲಿ, ಅಚ್ಯುತ್ ಅವರು ಕಾಣಿಸಿರುವ ಪೊಲೀಸ್ ಪಾತ್ರಗಳಂತೆ ಮತ್ತೊಂದು ಪಾತ್ರವಿದ್ದು ಅದಕ್ಕಾಗಿ ಅಪ್ಪಟ ಕನ್ನಡಿಗ ಭಾಸ್ಕರ್ ಬಂದಿದ್ದಾರೆ.ಇವರು ಹಿಂದಿಯ ಧೋನಿ, ನಾಮ್ ಶಬಾನ್ ಚಿತ್ರಗಳಲ್ಲಿ ನಟಿಸಿದ್ದಾರೆ.
ರಂಗಭೂಮಿ ಕಲಾವಿದೆ ಉಷಾ ರವಿಶಂಕರ್ ಹಾಗೂ ಸಲಗದಲ್ಲಿ ಸಂಪತ್: ಸಲಗ ಚಿತ್ರದಲ್ಲಿ ಉಷಾ ರವಿಶಂಕರ್ ಹಾಗೂ ಸಂಪತ್ ಅವರ ಪಾತ್ರ ಏನು ಎಂಬುದು ಇದುವರೆಗೂ ಗೊತ್ತಿಲ್ಲ, ಈ ಕುರಿತು ನಿರ್ದೇಶಕ ವಿಜಯ್ ಅವ್ರು ಕೂಡ ತಿಳಿಸಿಲ್ಲ. ಆದರೆ ಟೋನಿ ಸಿನಿಮಾ ನಿರ್ಮಾಣ ಮಾಡಿದ್ದ ಇಂದ್ರಕುಮಾರ್ ಸಲಗದಲ್ಲಿ ಖಳನಟನಂತೆ. ಇನ್ನೂ ಇತ್ತೀಚಿಗಷ್ಟೇ ನಿಧನರಾದ ನಟ ಚನ್ನಕೇಶವ ಸಹ ಚಿತ್ರದಲ್ಲಿದ್ದರು.
ಕಾಮಿಡಿಯನ್ ಬುದ್ದಿವಂತ ಲಾಯರ್ ಆದ್ರೆ, ಕಥೆಗಾರ ಹಳೆ ರೌಡಿ: ಯೆಸ್.., ಅದೇ ಇಕ್ಕಟ್ ಸಿನಿಮಾದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ ನಾಗಭೂಷಣ್ ಸಲಗದಲ್ಲಿ ಬುದ್ಧಿವಂತ ಲಾಯರ್ ಆಗಿದ್ದಾರೆ. ಇನ್ನು ಕಥೆಗಾರ ಹಾಗೂ ಲೇಖಕ ಕಡ್ಡಿಪುಡಿ ಕಾಂತರಾಜ್ ಹಳೆ ರೌಡಿಯಾಗಿ ಕಾಣಿಸಿಕೊಂಡಿದ್ದಾರೆ. ಸೂರ್ಯಣ್ಣ ಪಾತ್ರದಲ್ಲಿ ದಿನೇಶ್ ಆಟೋ ಡ್ರೈವರ್ ಭಾಸ್ಕರ್ ಕೆಲವು ಸೀನ್ ಗಳಲ್ಲಿ ಬಂದು ಹೋಗಿದ್ದಾರಂತೆ. ಹೀಗೆ ಸಲಗ ಸಣ್ಣ ಸಣ್ಣ ಪಾತ್ರಗಳಿಗೂ ಸ್ಪೇಸ್ ನೀಡಿರೋದು ನಿಜಕ್ಕೂ ಶ್ಲಾಘನೀಯ.
***