ಡಾ.ರಾಜ್ ಕುಮಾರ್ ಮೊಮ್ಮಗಳಾದ ಧನ್ಯಾ ರಾಮ್ ಕುಮಾರ್ ಹಾಗೂ ಸೂರಜ್ ಗೌಡ ಅಭಿನಯಸಿ ನಿರ್ದೇಶನ ಮಾಡಿರುವ ಚಿತ್ರ “ನಿನ್ನ ಸನಿಹಕೆ” ಇದೇ ಅಕ್ಟೋಬರ್ 8 ಶುಕ್ರವಾರದಂದು ರಿಲೀಸ್ ಆಗುತ್ತಿದೆ.
‘ನಿನ್ನ ಸನಿಹಕೆ’ ಚಿತ್ರದ ಪ್ರಿಮಿಯರ್ ಶೋ ಅಕ್ಟೋಬರ್ 7ಕ್ಕೆ ಡಾ ರಾಜಕುಮಾರ್ ರಸ್ತೆಯಲ್ಲಿರುವ ಪಿವಿಆರ್ ಒರಾಯಾನ್ ಮಾಲ್ ನಲ್ಲಿ ಗುರುವಾರ ಸಂಜೆ 7ಗಂಟೆಗೆ ಯೋಜಿಸಲಾಗಿದೆ, ಚಿತ್ರದ ನಾಯಕ ನಟ ಹಾಗೂ ನಿರ್ದೇಶಕ ಸೂರಜ್ ಗೌಡ, ನಾಯಕಿ ಧನ್ಯ ರಾಮ್ ಕುಮಾರ್, ನಿರ್ಮಾಪಕರಾದ ಅಕ್ಷಯ್ ರಾಜಶೇಖರ್, ರಂಗನಾಥ್ ಕೂಡ್ಲಗಿ ಮತ್ತು ಟೀಂ ಇಂದು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಪ್ರಿಮಿಯರ್ ಶೋ ವೀಕ್ಷಿಸಲು ಆಮಂತ್ರಣ ನೀಡಿದೆ. ಇದಕ್ಕೆ ಸಿ.ಎಂ ಬಸವರಾಜ ಬೊಮ್ಮಾಯಿ ಚಿತ್ರ ತಂಡದ ಆಮಂತ್ರಣವನ್ನು ಸ್ವೀಕರಿಸಿದ್ದು ಪ್ರಿಮಿಯರ್ ಶೋ ಗೆ ಬರಲು ಒಪ್ಪಿಕೊಂಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಡಾ ರಾಜ್ ಕುಮಾರ್ ಅವರ ಅಭಿಮಾನಿಯಾಗಿದ್ದು, ರಾಜ್ ಕುಟುಂಬದ ಕುಡಿ ಧನ್ಯಾ ಅವರಿಗೆ ಮತ್ತು ಇಡೀ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ
ನಿನ್ನ ಸನಿಹಕೆ ಪ್ರಿಮಿಯರ್ ಶೋ ವೇಳೆ ಇಡೀ ರಾಜ್ ಕಟುಂಬ ಭಾಗವಹಿಸಲಿದ್ದು ಶಿವಣ್ಣ, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯ್, ಯುವರಾಜ್ ಕುಮಾರ್, ಶ್ರೀಮುರಳಿ, ವಿಜಯ್ ರಾಘವೇಂದ್ರ ರಾಮ್ ಕುಮಾರ್ , ಧಿರೇನ್ ಸೇರಿದಂತೆ ಉದ್ಯಮ ದೊಡ್ಡ ಸ್ಟಾರ್ಸ್ ಪ್ರಿಮಿಯರ್ ಶೋಗೆ ಬರಲಿದ್ದಾರೆ.
ನಿನ್ನ ಸನಿಹಕೆ ಚಿತ್ರವನ್ನು ವೈಟ್ & ಗ್ರೇ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಅಕ್ಷಯ್ ರಾಜಶೇಖರ್ ಹಾಗೂ ರಂಗನಾಥ್ ಕೊಡ್ಲಿ ರವರು ನಿರ್ಮಿಸಿದ್ದಾರೆ. ಧನ್ಯಾ ರಾಮ್ ಕುಮಾರ್ ಅಭಿನಯದ ಮೊದಲ ಚಿತ್ರ.’ ಧನ್ಯಾ’ ರಾಮ್ ಕುಮಾರ್ ಮಗಳು. ರಾಜ್ ಕುಮಾರ್ ಮೊಮ್ಮಗಳು. ಶಿವಣ್ಣ, ರಾಘವೇಂದ್ರ ಮತ್ತು ಪುನೀತ್ ಎಲ್ಲರಿಗೂ ಸೋದರ ಸೊಸೆ. ರಾಜ್ ಕುಟುಂಬದಿಂದ ಹೀರೋಯಿನ್ ಆಗುತ್ತಿರೋ ಮೊದಲ ಪ್ರತಿಭೆ. ಹೀಗಾಗಿ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿದೆ.
