ಎಸ್ ಆರ್ ಗುರುದತ್ತ ಅವರ ನಿರ್ದೇಶನದ ‘ಮಿಸ್ ನಂದಿನಿ’ ಎನ್ನುವ ಹೆಸರಿನ ಸಿನಿಮಾದಲ್ಲಿ ನಟಿ ಪ್ರಯಾಂಕ ಉಪೇಂದ್ರ ಸರ್ಕಾರಿ ಶಾಲೆಯ ಟೀಚರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಿಸ್ ನಂದಿನಿ ಮಕ್ಕಳ ಚಿತ್ರವಾಗಿದ್ದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಲಿದೆ ಎಂದು ನಿರ್ದೇಶಕ ತಿಳಿಸಿದ್ದಾರೆ. ಸರ್ಕಾರಿ ಶಾಲೆ ಖಾಸಗಿ ಶಾಲೆಯ ಗುಣಮಟ್ಟಕ್ಕೆ ಏರಲು ಸಾಧ್ಯ ಎನ್ನುವ ಎಳೆ ಸಿನಿಮಾದಲ್ಲಿ ಇರಲಿದೆ.
ನಿಜಜೀವನದಲ್ಲಿ ಶಿಕ್ಷಕಿಯಾಗುವ ಆಸೆ ಮತ್ತು ಅವಕಾಶಗಳಿದ್ದವು. ಆದರೆ ಕಾರಣಾಂತರಗಳಿಂದ ಶಿಕ್ಷಕಿಯಾಗಲು ಸಾಧ್ಯವಾಗಲಿಲ್ಲ. ಆದರೆ ಆ ಕನಸು ಈ ಸಿನಿಮಾ ಮೂಲಕ ನನಸಾಗುತ್ತಿದೆ. ಬೆಳ್ಳಿಪರದೆ ಮೇಲೆ ಶಿಕ್ಷಕಿಯಾಗುತ್ತಿದ್ದೇನೆ ಎಂದು ಪ್ರಿಯಾಂಕಾ ಉಪೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ಆರ್ ಕೆ ಬ್ಯಾನರ್ ಅಡಿ ಮಿಸ್ ನಂದಿನಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಸಾಯಿ ಸರ್ವೇಶ್ ಅವರು ಸಂಗೀತ ನಿರ್ದೇಶನ ಹೊಣೆ ಹೊತ್ತಿದ್ದರೆ, ವೀರೇಶ್ ಅವರು ಸಿನಿಮೆಟೋಗ್ರಾಫರ್ ಆಗಿದ್ದಾರೆ.
****