ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅ.6 ರಂದು ಅವರ ಹುಟ್ಟುಹಬ್ಬವನ್ನು ಸೆಲೆಬರೇಟ್ ಮಾಡಿಕೊಳ್ಳುತ್ತಿಲ್ಲಾ, ಈ ಬಗ್ಗೆ ಅವರು ತಮ್ಮ ಇನ್ಸ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೂವನ್ನು ಶೇರ್ ಮಾಡುವ ಮೂಲಕ ಅವರ ಈ ನಿರ್ಧಾರಕ್ಕೆ ಕಾರಣ ಏನೆಂದು ತಿಳಿಸಿದ್ದಾರೆ. ನಟ ಧ್ರುವ ಸರ್ಜಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅದ್ದೂರಿ, ಬಹದ್ದೂರ್, ಭರ್ಜರಿ, ಪೊಗರು ಸಿನಿಮಾಗಳ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅ.6ರಂದು ಅವರ ಜನ್ಮದಿನ. ಆ ದಿನವನ್ನು ದೊಡ್ಡದಾಗಿ ಸೆಲೆಬ್ರೇಟ್ ಮಾಡಬೇಕು ಎಂಬ ಆಸೆ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಆದರೆ ಆ ಬಗ್ಗೆ ಧ್ರುವ ಸರ್ಜಾ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಾರಿ ಜನ್ಮದಿನ ಆಚರಿಸಿಕೊಳ್ಳದೇ ಇರಲು ಅವರು ನಿರ್ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಅವರು ತಮ್ಮ ತೀರ್ಮಾನ ಏನೆಂಬುದನ್ನು ತಿಳಿಸಿದ್ದಾರೆ.
ಎಲ್ಲರಿಗೂ ನಮಸ್ಕಾರ. ಅ.6ರಂದು ನನ್ನ ಜನ್ಮದಿನ. ನಾನೇನು ದೊಡ್ಡ ಸೆಲೆಬ್ರಿಟಿ ಅಲ್ಲ. ಆದ್ರೂ ನನ್ನ ವಿಐಪಿಗಳಲ್ಲಿ ಒಂದು ವಿನಂತಿ. ಈ ಬಾರಿ ಸೆಲೆಬ್ರೇಟ್ ಮಾಡುವಂಥ ಮನಸ್ಥಿತಿಯಲ್ಲಿ ನಾನಿಲ್ಲ. ಅದು ನಿಮ್ಮೆಲ್ಲರಿಗೂ ಅರ್ಥ ಆಗುತ್ತದೆ ಎನಿಸುತ್ತದೆ. ಅದಕ್ಕಿಂತಲೂ ಎರಡೂ ಮುಖ್ಯ ಕಾರಣ ಇದೆ. ದೊಡ್ಡ ಕಾರಣ ಎಂದರೆ ಕೊವಿಡ್. ಮತ್ತೊಂದು ಕಾರಣ ನಾನು ಊರಲ್ಲಿ ಇಲ್ಲದಿರುವುದು. ಶೂಟಿಂಗ್ ಸಲುವಾಗಿ ವಿಶಾಖಪಟ್ಟಣಕ್ಕೆ ಹೋಗಿರುತ್ತೇನೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
****