ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿ ರಚಿತಾ ರಾಮ್‌ಗೆ ಇಂದು (ಅ.3) ಹುಟ್ಟುಹಬ್ಬದ ಸಂಭ್ರಮ. ಆಪ್ತರು, ಅಭಿಮಾನಿಗಳು, ಸ್ನೇಹಿತರು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗು ಚಿತ್ರರಂಗಕ್ಕೂ ರಚಿತಾ ಕಾಲಿಟ್ಟಿದ್ದಾರೆ.
ಮೆಗಾ ಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಹೀರೋ ಆಗಿರುವ ಸೂಪರ್ ಮಚ್ಚಿ ಸಿನಿಮಾಕ್ಕೆ ಅವರು ನಾಯಕಿಯಾಗಿದ್ದಾರೆ. ಇನ್ನು, ಕನ್ನಡ ಚಿತ್ರರಂಗದಲ್ಲಿ ರಚಿತಾ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’, ರಮೇಶ್ ಅರವಿಂದ್ ನಿರ್ದೇಶನದ ‘100’ ಸಿನಿಮಾಗಳು ತೆರೆಗೆ ಸಿದ್ಧವಾಗಿವೆ. ಈ ಸಿನಿಮಾಗಳಲ್ಲಿ ರಚಿತಾ ಡಿಫರೆಂಟ್ ಪಾತ್ರ ಮಾಡಿದ್ದಾರೆ. ಇನ್ನು, ಧನಂಜಯ ಜೊತೆಗೆ ಮಾನ್ಸೂನ್ ರಾಗ, ಪ್ರಜ್ವಲ್ ದೇವರಾಜ್ ಜೊತೆಗೆ ವೀರಂ, ಅಜಯ್ ರಾವ್ ಜೊತೆಗೆ ಲವ್ ಯೂ ರಚ್ಚು, ನಟ ಸತೀಶ್ ನೀನಾಸಂ ಅವರೊಂದಿಗೆ ಮ್ಯಾಟ್ನಿ, ಅಭಿಷೇಕ್ ಅಂಬರೀಶ್ ಜೊತೆಗೆ ಬ್ಯಾಡ್ ಮ್ಯಾನರ್ಸ್, ಏಪ್ರಿಲ್, ಲಿಲ್ಲಿ, ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮಿ ಆರ್ ಹೇಟ್ ಮಿ, ರವಿ ಬೋಪಣ್ಣ, ಪಂಕಜ ಕಸ್ತೂರಿ, ಸೀರೆ, ಪಂಥ ಸಿನಿಮಾಗಳು ಅವರ ಕೈಯಲ್ಲಿವೆ.
****