ಶಾಲೆಯಲ್ಲಿ ಶಿಕ್ಷಕರಿಂದ ನಾನು ಕಲಿತ ಮೊದಲ ಪಾಠ, ‘ವಂಚಕರು ಎಂದಿಗೂ ಏಳಿಗೆಯಾಗಲ್ಲ’ ಎಂದು ಸಿದ್ದಾರ್ಥ್ ಬರೆದುಕೊಂಡಿದ್ದಾರೆ. ಇದು ಸಮಂತಾ ಉದ್ದೇಶಿಸಿ ಮಾಡಿದ ಟ್ವೀಟ್ ಎಂದು ಹೇಳಲಾಗುತ್ತಿದೆ. ಸಿದ್ದಾರ್ಥ್ಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದು ಅಸಮಾಧಾನ ಹೊರಹಾಕಿದ್ದಾರೆ. ನಾಗ ಚೈತನ್ಯ ಅವರನ್ನು ಪ್ರೀತಿಸಿ ಸಮಂತಾ ಮದುವೆ ಆದರು. ಈಗ ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು ಮುರಿದು ಇಬ್ಬರೂ ಬೇರೇ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬೆನ್ನಲ್ಲೇ ನಟ ಸಿದ್ದಾರ್ಥ್ ಮಾಡಿರುವ ಟ್ವೀಟ್ ಒಂದು ವೈರಲ್ ಆಗುತ್ತಿದೆ
ಸಿದ್ದಾರ್ಥ್ ಹಾಗೂ ಸಮಂತಾ ಅಕ್ಕಿನೇನಿ ಒಂದು ಕಾಲದಲ್ಲಿ ರಿಲೇಶನ್ಶಿಪ್ನಲ್ಲಿದ್ದರು. ಆದರೆ, ಕಾರಣಾಂತರಗಳಿಂದ ಇವರ ಸಂಬಂಧ ಮುರಿದು ಬಿದ್ದಿತ್ತು. ಆ ನಂತರ ನಾಗ ಚೈತನ್ಯ ಅವರನ್ನು ಪ್ರೀತಿಸಿ ಸಮಂತಾ ಮದುವೆ ಆದರು. ಈಗ ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು ಮುರಿದು ಇಬ್ಬರೂ ಬೇರೇ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬೆನ್ನಲ್ಲೇ ನಟ ಸಿದ್ದಾರ್ಥ್ ಮಾಡಿರುವ ಟ್ವೀಟ್ ಒಂದು ವೈರಲ್ ಆಗುತ್ತಿದೆ. ಇದು ಸಮಂತಾ ಅವರ ಕುರಿತು ಮಾಡಿದ ಟ್ವೀಟ್ ಎನ್ನಲಾಗುತ್ತಿದೆ.
****