ಸ್ಯಾಂಡಲ್ ವುಡ್ ನ ಕಲಿಯುಗ ಕರ್ಣ, ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಅವರ ಹುಟ್ಟಿದ ಹಬ್ಬ ಇಂದು (ಅ.3). ಅಭಿಷೇಕ್ ಜನ್ಮ ದಿನದ ಪ್ರಯುಕ್ತ ಅವರು ಅಭಿನಯಿಸುತ್ತಿರುವ ಚಿತ್ರ ತಂಡಗಳಿಂದ ಪೋಸ್ಟರ್ ಮತ್ತು ಟೀಸರ್ ಗಳು ಉಡುಗೊರೆಯಾಗಿ ಸಿಗುತ್ತಿವೆ.
ಅಭಿಷೇಕ್ ಅಂಬರೀಷ್ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ಇದಕ್ಕೆ ಕಾರಣ ರೆಬೆಲ್ ಸ್ಟಾರ್ ಕುಟುಂಬ. ಅಂಬರೀಷ್ ಹಾಗೂ ಸುಮಲತಾ ಪುತ್ರ ಎನ್ನುವುದು ಒಂದು ಕಾರಣವಾದರೆ, ಅಭಿಷೇಕ್ ತಮ್ಮ ನಟನೆ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ಕಾಮನ್ ಡಿಪಿ ಅನಾವರಣ ಮಾಡಲಾಗಿದೆ. ನಟಿ, ಸಂಸದೆ ಸುಮಲತಾ ಅಂಬರೀಷ್ ಕಾಮನ್ ಡಿಪಿ ಅನಾವರಣ ಮಾಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ತಮ್ಮ ಡಿಪಿಗೆ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಅಭಿಷೇಕ್ಗೆ ಶುಭಾಶಯ ಕೋರುತ್ತಿದ್ದಾರೆ.