ಗೋಲ್ಡನ್ ಸ್ಟಾರ್ ಗಣೇಶ್, ಪವನ್ ಕುಮಾರ್, ದೂದ್ ಪೇಡ ದಿಗಂತ್ ನಟಿಸುತ್ತಿರುವ ಗಾಳಿಪಟ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯಗೊಂಡಿದೆ. ಗಾಳಿಪಟ ಚಿತ್ರದಲ್ಲಿ ನಟಿಸಿದ್ದ ಹಿರಿಯ ನಟ ಅನಂತ್ ನಾಗ್ ಗಾಳಿಪಟ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರ ಥಿಯೇಟರ್ಗಳಲ್ಲಿ ಶೇಕಡ ನೂರರಷ್ಟು ಭರ್ತಿಗೆ ಅವಕಾಶ ನೀಡಿರುವುದರಿಂದ ಇಡೀ ಚಿತ್ರರಂಗಕ್ಕೆ ಖುಷಿಯಾಗಿದ್ದು ಉತ್ಸಾಹ ಹೆಚ್ಚಿದೆ. ಬಿಡುಗಡೆಗೂ ಸ್ಟಾರ್ ನಟರಿಂದ, ಉದಯೋನ್ಮುಖ ಯುವನಟರೆಲ್ಲರ ಸಾಲು-ಸಾಲು ಸಿನಿಮಾಗಳು ಕ್ಯೂ ನಿಂತಿವೆ. ಈ ಸಂದರ್ಭದಲ್ಲಿ ಗಾಳಿಪಟ-2 ಚಿತ್ರ ತಂಡವೂ ಕೂಡ ಖುಷಿಯಿಂದಲ್ಲೇ ತನ್ನ ಚಿತ್ರೀಕರಣವನ್ನು ಪೂರ್ಣಗೊಳಿಸುತ್ತ ಚಿತ್ತ ಹರಿಸಿದೆ.
ಈ ಚಿತ್ರದ ನಿರ್ದೇಶಕರಾದ ಯೋಗರಾಜ್ ಭಟ್ಟರು ಇತ್ತೀಚಿಗಷ್ಟೇ ಕುದುರೆಮುಖದಲ್ಲಿ ಸಿನಿಮಾ ಶೂಟಿಂಗ್ ಕೆಲಸ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಕುದುರೆ ಮುಖದಲ್ಲಿನ ಪ್ರಕೃತಿ ಸೌಂದರ್ಯವನ್ನು ಕೂಡ ಚಿತ್ರದಲ್ಲಿ ಸೆರೆಹಿಡಿಯಲಾಗಿದ್ದು ಪ್ರೇಕ್ಷಕರಿಗೆ ಉತ್ತಮ ಫೀಲ್ ಕೊಡಲಿದೆ ಎಂದಿದ್ದಾರೆ. ಇನ್ನೂ ಗಾಳಿಪಟ-2 ಚಿತ್ರದ ಕೊನೆ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸಲು ತಯಾರಿಯಲ್ಲಿದ್ದು, ಅಕ್ಟೋಬರ್ 4ರಿಂದ ಶೂಟಿಂಗ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಚಿತ್ರದಲ್ಲಿರುವ ಮೂವರು ನಾಯಕರ ಇಂಟ್ರಡಕ್ಷನ್ ಸಾಂಗ್ ನ ಶೂಟಿಂಗ್ ಹಾಗೂ ವಿದೇಶಿ ಪ್ರಯಾಣಕ್ಕೆ ಹೊರಡುವ ದೃಶ್ಯಗಳನ್ನ ಚಿತ್ರೀಕರಿಸಲಾಗಿದ್ದು ಅನಂತ್ ನಾಗ್ ರವರು ಚಿತ್ರದಲ್ಲಿ ಕನ್ನಡ ಮೇಷ್ಟ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣೇಶ್ ದಿಗಂತ್ ಪವನ್ ಕುಮಾರ್ ಸಂಯುಕ್ತ ಹಾಗೂ ವೈಭವಿ ಸೇರಿದಂತೆ ಸಾಕಷ್ಟು ಕಲಾವಿದರ ತಂಡವೊಂದನ್ನು ಒಟ್ಟಿಗೆ ಸೇರಿಸಿ ಕೆಲಸಮಾಡಿರುವುದು ಖುಷಿಯ ವಿಚಾರ. ಇನ್ನು ಚಿತ್ರದ ನಿರ್ಮಾಪಕರಾದ ರಮೇಶ್ ರೆಡ್ಡಿ ಅವರು ಕೂಡ ಸಾಕಷ್ಟು ಸಹಕಾರವನ್ನು ನೀಡಿರುವುದರಿಂದ ಚಿತ್ರೀಕರಣ ಉತ್ತಮವಾಗಿ ನಡೆಯಲು ಸಾಧ್ಯವಾಗಿದೆ ಎಂದು ಭಟ್ರು ಹೇಳಿದ್ದಾರೆ.
****