ಸದಾ ತಮ್ಮ ನೇರ ನುಡಿಗಳಿಗೆ ಹೆಸರಾಗಿರುವ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ದಕ್ಷಿಣ ಭಾರತದ ತಾರೆಯರಾದ ಸಮಂತಾ ಅಕ್ಕಿನೇನಿ ಹಾಗೂ ನಾಗಚೈತನ್ಯ ಡೈವೋರ್ಸ್ ನೀಡಿರುವ ಬೆನ್ನಲ್ಲೇ ತಮ್ಮದೇ ಸ್ಟೈಲ್ ನಲ್ಲಿ ಟ್ವೀಟ್ ಮಾಡಿರುವ ಅವರು ಸಂಭ್ರಮಿಸಬೇಕಾಗಿರುವುದು ಮದುವೆಗಳನ್ನಲ್ಲ, ವಿಚ್ಚೇದನಗಳನ್ನು ಎಂದು ಟ್ವೀಟ್ ಮಾಡಿದ್ದಾರೆ.
ಅವರು ಇನ್ನೂ ಮುಂದುವರೆದು ಮದುವೆಗಳು ಸಾವಿದ್ದಂತೆ ಆದರೆ ವಿಚ್ಚೇದನ ಒಂದು ರೀತಿ ಪುನರ್ಜನ್ಮ ಇದ್ದಂತೆ ಎಂದು ಅವರು ಹೇಳಿದ್ದಾರೆ. ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ಪರಸ್ಪರ ಒಪ್ಪಿಗೆ ಮೇರೆಗೆ ತಮ್ಮ ವಿಚ್ಚೇದನವನ್ನು ಅಧಿಕೃತವಾಗಿ ಧೃಡಪಡಿಸಿಕೊಂಡ ಬೆನ್ನಲ್ಲೇ ಈಗ ರಾಮ್ ಗೋಪಾಲ್ ವರ್ಮಾ ಅವರ ಟ್ವೀಟ್ ಬಂದಿದೆ.